LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗುರುಮಾಠಕಲ್ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಗಳ ದರ್ಬಾರ್ ಜನರು ಪರದಾಟ

Advertisement
ಗುರುಮಾಠಕಲ್ : ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರದ ಬಿಸಿ ತೆಲಂಗಾಣದ ಗಡಿ ಭಾಗದ ಗುರುಮಾಠಕಲ್ ಜನರಿಗೆ ಮುಟ್ಟಿದೆ.

ಮುಂಗಡವಾಗಿ ರೈಲು ಪ್ರಯಾಣ, ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಗಳಿಗೆ ತೆರಳಬೇಕಿರುವ ಜನರು ತಡಬಡಿಸುತ್ತಿದರೆ.

ಗಡಿ ತಾಲೂಕು ಗುರುಮಠಕಲ್ ದಿಂದ ಯಾದಗಿರಿ ಹೋಗುವ ಸಾಮಾನ್ಯವಾಗಿ 50ರೂ. ಒಳಗೆ ಟಿಕೇಟ್ ದರ ಇದ್ದು, ಸಾರಿಗೆ ಬಸ್ ಬಂದ್ ಆಗಿರುವುದನ್ನು ಕಂಡು ಖಾಸಗಿ ವಾಹನದ ಮಾಲೀಕರು 80 ರಿಂದ 100 ರೂಪಾಯಿಗಳು ತೆಗೆದುಕುಳ್ಳುತ್ತಿದ್ದರು ಗಾಳಿ ಬಿಟ್ಟಗೆ ತುರಿಕೊಳ್ಳಬೇಕು ಎಂಬಂತೆ ಜನರ ಜೇಬಿಗೆ ಕನ್ನ ಹಾಕುತ್ತಿರುವ ಖಾಸಗಿ ವಾಹನಗಳ ಚಾಲಕರು ಬಸ್‌ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೆಚ್ಚಿನ ಹಣ ಪೀಕುತ್ತಿರುವುದು ಕಂಡು ಬಂತು.

ಈ ಬಗ್ಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಲು ಸಹಜವಾಗಿಯೇ ನಿರಾಕರಿಸಿದರೇ, ಆದರೆ ಅನಿವಾರ್ಯ ಪರಸ್ಥಿತಿ ಯಲ್ಲಿ ಪ್ರಯಾಣಿಕರನ್ನೇ ದಬಾಯಿಸಿ, ಹೋಗೊದಿದ್ದರೆ ಹೋಗು, ಎಲ್ಲರೂ ಹೋಗುತ್ತಿಲ್ಲವೇ ಎಂದು ಹೆದರಿಸಿ ಖಾಸಗಿ ವಾಹನಗಳ ಹತ್ತಿಸುತ್ತಿರುವು ಕಂಡು ಬಂತು.

ಇಡಿ ನಮ್ಮ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಬಂದ್‌ ಆಗುವ ಸುದ್ದಿ ತಿಳಿದು ಹೆಚ್ಚಿನ ಜನರು ಪ್ರಯಾಣ ಮುಂದೆ ಹಾಕಿದ್ದಾರೆ. ಹಾಗಾಗಿ ಗುರುಮಠಕಲ್‌ ಬಸ್‌ ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು ದೃಶ್ಯ ನೋಡಿ

ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ತೆಲಂಗಾಣದ ಸಾರಿಗೆ ವಾಹನಗಳು ಸೇವೆ ನೀಡುವುದು ಕಂಡು ಬಂತು.
ಅಮಾಯಕರಿಂದ ವಸೂಲಿ ತಡೆಯುವವರಾರು : ಸಾರಿಗೆ ಬಸ್ ಗಳು ಬಂದ್ ಆಗಿದ್ದರಿಂದ ಗುರುಮಠಕಲ್ ದಿಂದ ಯಾದಗಿರಿಗೆ 80ರೂ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತದೆ ಇದನ್ನು ತಕ್ಷಣ ತಡೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ವರದಿ : ರವಿ ಬುರನೋಳ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ