LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಡಿ ಕೆ ಶಿವಕುಮಾರ್‌ 

Advertisement

ಬೆಂಗಳೂರು : "ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಬಡ ಹಾಗೂ ಆಡಳಿತ ವ್ಯವಸ್ಥೆ ಟೀಕಿಸುವ ಮತದಾರರ ಹೆಸರನ್ನು ಗುರಿಯಾಗಿಸಲಾಗಿದೆ. ಬಿಜೆಪಿ ಜೊತೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ" ಎಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ವಾಗ್ದಾಳಿ ನಡೆಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

"ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಆಯುಕ್ತರನ್ನು ಬಂಧಿಸಬೇಕು ಹಾಗೂ ಅಕ್ರಮವಾಗಿ ನಡೆದ ಚುನಾವಣೆಗಳನ್ನು ರದ್ದು ಮಾಡಬೇಕು. ಸಂವಿಧಾನದ ಮೂಲಕ ಈ ದೇಶದ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ಅಧಿಕಾರ ನೀಡಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಾಕ್ಷಿಗಳೂ ಕಾಣುತ್ತಿವೆ" ಎಂದರು.

"ಜ್ಞಾನೇಶ್‌ ಕುಮಾರ್‌ ಅವರು ಚೀಫ್‌ ಎಲೆಕ್ಷನ್‌ ಕಮಿಷನರ್‌ ಅಲ್ಲ, ಚೀಫ್‌ ಸೆಲೆಕ್ಷನ್‌ ಕಮಿಷನರ್‌ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು.

ಅಧಿಕಾರದ ವ್ಯಾಮೋಹ ಜಾಸ್ತಿ ದಿನ ಇರುವುದಿಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ನಡೆದಿರುವ ಎಸ್‌ ಐಆರ್‌ ರದ್ದುಗೊಳ್ಳಬೇಕು. ಹೊಸದಾಗಿ ಮರುಪರಿಶೀಲನೆ ನಡೆಯಬೇಕು" ಎಂದರು.

ಮೋದಿಯವರ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ

"ಪ್ರಧಾನಿ ಮೋದಿ ಅವರು ಕೈಗೊಂಬೆಯಂತಿರುವವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡಿದರು. ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ತೀರ್ಪಿನ ವಿರುದ್ಧ ಸಿಡಿದೆದ್ದಿದ್ದಾರೆ. ಇದು ನಿಮ್ಮ ತೀರ್ಪಿನ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ" ಎಂದು ಕುಹಕವಾಡಿದರು.

"ಕರ್ನಾಟಕದ ಜನಸಂಖ್ಯೆ 7 ಕೋಟಿ. ಇದರಲ್ಲಿ 5.54 ಕೋಟಿ ಮತದಾರರು ಇದ್ದಾರೆ. ಇದನ್ನು ಎಸ್‌ ಐಆರ್‌ ನಡೆಸಿ 4.46 ಕೋಟಿಗೆ ಇಳಿಕೆ ಮಾಡಲಾಗಿದೆ. 30-40 ಲಕ್ಷಕ್ಕೆ ನೋಟಿಸ್‌ ನೀಡಲಾಗಿದೆ. ಇದರ ತೀರ್ಮಾನವನ್ನು ನಾವು ಕಾಯುತ್ತೇವೆ.

ಮತದಾನದ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ನಮ್ಮ ಸಂವಿಧಾನ ನೀಡಿದ ಅತಿದೊಡ್ಡ ಅವಕಾಶ ಮತದಾನ. ಇದು ಕಳೆದು ಹೋಗಲು ನಾವು ಬಿಡೆವು" ಎಂದರು.

"ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಖಾನ್‌ ಅವರು 31 ಸಾವಿರ ಮತಗಳ ಅಂತರದಿಂದ ಚುನಾವಣ ಆಯೋಗದ ಪ್ರಕಾರ ಸೋತಿದ್ದರು. ಈಗ ಎಸ್‌ ಐಆರ್‌ ನಿಂದ 12 ಲಕ್ಷ ಮತಗಳು ಕಡಿಮೆಯಾಗಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿದ್ದಾರೆಯೇ?" ಎಂದರು.

"ಮಹದೇವಪುರದಲ್ಲಿ 3 ಲಕ್ಷ ಮತಗಳು ಕಾಣೆಯಾಗಿವೆ. ಈಗ 12 ಲಕ್ಷ ಮತಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಬಿಜೆಪಿಯ ದುಷ್ಕೃತ್ಯದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತಿದೆ. ಆದ ಕಾರಣ ಕಾಂಗ್ರೆಸ್‌ ಪಕ್ಷ ಹೋರಾಟ ಮಾಡುತ್ತಿದೆ. ಎಸ್‌ ಐಆರ್‌ ಸೇರಿದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ" ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ್ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಸಿಎಂ ಭರವಸೆಡಾ.ಬಿ. ಆರ್. ಅಂಬೇಡ್ಕರ್‌ರ ಆದರ್ಶಕ್ಕೆ ತಕ್ಕಂತೆ ಸುಸಜ್ಜಿತ ವೃತ್ತ ನಿರ್ಮಿಸಿ: ಎನ್.ಎಸ್. ಬೋಸರಾಜುಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಡಿ ಕೆ ಶಿವಕುಮಾರ್‌ ತ್ರೇತಾಯುಗದಲ್ಲಿ ಕನ್ನಡಕ :'ರಾಮಾಯಣ' ಪೋಸ್ಟರ್ ನೋಡಿ ಟ್ರೋಲ್ 2 ಚಿನ್ನ ಸೇರಿ 23 ಪದಕ ಗೆದ್ದ ಭಾರತ ಜ್ಞಾನಶ್ರೀ ಫುಡ್ಸ್ ಗೆ ಮುರಳೀಧರ ಹಾಲಪ್ಪ ಭೇಟಿ : ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ ಪ್ರಶಂಸೆ ಜಿಲ್ಲಾ ಮಟ್ಟದ ರಿಂಗ್ ಬಾಲ್‌ನಲ್ಲಿ ಸಿದ್ಧಾರ್ಥ ಪಿಯು ಕಾಲೇಜಿಗೆ ಸಾಧನೆ: ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ 2 ಲಕ್ಷ  ಕೊಟ್ಟರೆ ಅಗ್ನಿವೀರ್ ಹುದ್ದೆ ಹೆಸರಲ್ಲಿ ವಂಚನೆಗೆ ಯತ್ನ : ಇಬ್ಬರ ಬಂಧನ.