ಪAಚ ರಾಜ್ಯಗಳ ಚುನಾವಣೆ ಫಲಿತಾಂಶ ಹಲವು ಐತಿಹಾಸಿಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಯಿತು. ಸ್ವಾತಂತ್ರಾö್ಯನAತರ ಪ್ರಥಮವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಿತು.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ೫೦ ವರ್ಷಗಳ ನಂತರ ಪ್ರಥಮವಾಗಿ ದೇಶದ ಯಾವುದೇ ರಾಜ್ಯಗಳಲ್ಲೂ ಕಮುನಿಷ್ಟ ಪಕ್ಷ ಅಧಿಕಾರದಿಂದ ದೂರ ಉಳಿಯಿತು.
ಕೇರಳದಲ್ಲಿ ೨೦೧೬ ರಿಂದ ಅಧಿಕಾರದಲ್ಲಿದ್ದ ಪಿಣರಾಯಿ ವಿಜಯನ್ ಸರಕಾರ ಈ ಭಾರಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕೇರಳದಲ್ಲಿ ಅಧಿಕಾರದ ಗದ್ದುಗೆ ಏರಿತು.
ಇದರೊಂದಿಗೆ ಇದೀಗ ಕಮುನಿಷ್ಟ ಪಕ್ಷ ಕಳೆದ ೫೦ ವರ್ಷಗಳಿಂದ ಈಚೆಗೆ ಯಾವುದೇ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿಲ್ಲ ಎಂಬ ಹಣೆಪಟ್ಟಿಯನ್ನು ಹೊತ್ತು ಕೊಳ್ಳುವಂತಾಯಿತು.
ಬದಲಾವಣೆ ಗಾಳಿ: ಪಶ್ಚಿಮ ಬಂಗಾಳ ಅಧಿಕಾರ ಗದ್ದುಗೆಯನ್ನು ಬಿಜೆಪಿ ಹಿಡಿಯುವುದರ ಮೂಲಕ ಹಾಗೂ ಕೇರಳದಲ್ಲಿ ಕಮುನಿಷ್ಟ ಪಕ್ಷದ ಆಡಳಿತ ಅಂತ್ಯ ಆಗುವುದರ ಜೊತೆಗೆ ಕಾಲ ಸರಿದಂತೆ ಬದಲಾವಣೆ ಗಾಳಿ ಬೀಸಿತು ಎಂಬುದನ್ನು ಇದರಿಂದ ಮನಗಾಣಬಹುದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸ್ಸು, ಮಮತಾ ಬ್ಯಾನರ್ಜಿ ಸುಧೀರ್ಘ ಕಾಲದವರೆಗೆ ಆಡಳಿತ ನಡೆಸಿದ ನಂತರ ಕೊನೆಗೂ ಆ ನಾಡಿನಲ್ಲಿ ಬದಲಾವಣೆ ಗಾಳಿ ಬೀಸಿದೆ. ಪ್ರಥಮವಾಗಿ ರಾಷ್ಟಿçÃಯ ಪಕ್ಷ ಪ. ಬಂಗಾಳದಲ್ಲಿ ಅಧಿಕಾರ ಗದ್ದುಗೆ ಹಿಡಿಯಿತು.

