Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಮ್ಮ ಸಾವಿನ ಕುರಿತು ಸುಳ್ಳು ಸುದ್ದಿ : ಪೊಲೀಸರ ದೂರು ನೀಡಿದ ದೊಡ್ಡಣ್ಣ 

Advertisement

ಬೆಂಗಳೂರು: "ಕೇವಲ ಪ್ರಚಾರ ಮತ್ತು ವ್ಯೂಸ್ ಗಳಿಸುವುದಕ್ಕಾಗಿ ಜೀವಂತ ಇರುವವರ ಸಾವಿನ ಸುಳ್ಳು ಸುದ್ದಿ ಬಿತ್ತರಿಸುವ ಮುಖೇಡಿಗಳ ಹೆಡೆಮುರಿ ಕಟ್ಟಿ ತಕ್ಷಣವೇ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಬೇಕು" ಎಂದು ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ದೊಡ್ಡಣ್ಣ ಸಿಡಿದೆದ್ದಿದ್ದಾರೆ.

ತಮ್ಮ ನಿಧನದ ಕುರಿತು ರಾಜ್ಯ ಮಟ್ಟದಲ್ಲಿ ಸುಳ್ಳು ವದಂತಿ ಹರಡಿದ್ದ ಕಿಡಿಗೇಡಿಗಳ ವಿರುದ್ಧ ಅವರು ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಟ ದೊಡ್ಡಣ್ಣ ಅವರು ವಿಧಿವಶರಾಗಿದ್ದಾರೆ ಎಂಬ ಸುಳ್ಳು ಪೋಸ್ಟ್‌ಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.

ಇದರಿಂದ ಆತಂಕಗೊಂಡ ನೂರಾರು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ದೊಡ್ಡಣ್ಣ ಅವರಿಗೆ ಸತತ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

ಅಂದೇ ವಿಡಿಯೋ ಬಿಡುಗಡೆ ಮಾಡಿದ್ದ ಹಿರಿಯ ನಟ:

ತಮ್ಮ ಸಾವಿನ ಸುಳ್ಳು ವಾರ್ತೆ ಹರಿದಾಡಿದ ದಿನವೇ ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೋ ಸಂದೇಶ ರವಾನಿಸಿದ್ದ ದೊಡ್ಡಣ್ಣ, "ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡಬೇಡಿ" ಎಂದು ಸ್ಪಷ್ಟನೆ ನೀಡಿದ್ದರು. 

ಜೊತೆಗೆ ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಅದರಂತೆ ಈಗ ಸೈಬರ್ ಪೊಲೀಸ್ ಕಚೇರಿಗೆ ಭೇಟಿ ನೀಡಿ ಲಿಖಿತ ದೂರು ದಾಖಲಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜುರವರನ್ನ ಉಚ್ಚಟನೆ ಮಾಡಿರುವ ಬಿಜೆಪಿ ಪಕ್ಷದ ವಿರುದ್ಧ ಮದ್ದೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶಖಡಕಲಾಟ ಪೊಲೀಸರಿಂದ ಮೋಟರ್ ಸೈಕಲ್‌ ಕಳ್ಳರ ಬಂಧನವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಾಗಲಕೋಟೆ ವಿಭಾಗದ ವ್ಯವಸ್ಥಾಪಕರಿಗೆ ಸಾರ್ವಜನಿಕರ ಪರವಾಗಿ ಮನವಿ52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗು : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ ಭಾರತಕ್ಕೆ ಮತ್ತೇ ಮೂರು ಚಿನ್ನದ ಪದಕಭಾರತಕ್ಕೆ ಬಾಕ್ಸಿಂಗ್‌ನಲ್ಲೇ ೭ ಚಿನ್ನದ ಪದಕಭಾರತ ಹಾಕಿಯ ಅದೃಷ್ಟ ಬದಲಾಯಿಸುವುದೇ ಆರೆಂಜ್ ಜೆರ್ಸಿಪೆರುವಿನಲ್ಲಿ ಪ್ರವಾಸಿ ವಿಮಾನ ಪತನ : ಇಬ್ಬರು ಪೈಲಟ್‌ ಗಳು ಸೇರಿ 13 ಜನರು ಸಾವುಭಾರಿ ಮಳೆಗೆ ಗುಡ್ಡ ಕುಸಿತ : ಮೂವರು ಸ್ಥಳದಲ್ಲೇ ದುರಂತ ಅಂತ್ಯ