ಭಾರತ ಹಾಕಿ ತಂಡವು ೧೯೭೫ ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈಗ ಆ ಸಿಹಿ ಅನುಭವ ನಡೆದುಹೋಗಿ ೫೧ ವರ್ಷಗಳೇ ಕಳೆದಿವೆ.
ಈಗ ಇನ್ನೆರಡು ವಾರಗಳ ಸಮಯದಲ್ಲಿ ಇನ್ನೊಂದು ವಿಶ್ವಕಪ್ ಹಾಕಿ ಪಂದ್ಯಾವಳಿ ಆರಂಭವಾಗುತ್ತಿದೆ. ಭಾರತ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ. ಆದರೆ ಈ ಬಾರಿ ಒಂದು ವಿಶೇಷವೆಂದರೆ ಭಾರತೀಯ ಆಟಗಾರರು ಈ ಬಾರಿ ಆರೆಂಜ್ ಜರ್ಸಿ ತೊಟ್ಟು ಕಣಕ್ಕೆ ಇಳಿಯಲಿದ್ದಾರೆ.
ಸ್ವಾತಂತ್ರö್ಯ ಸಿಕ್ಕನಂತರ ನಡೆದ ಮೊದಲ ವಿಶ್ವಕಪ್ ಹಾಕಿ ೧೯೭೫ ರಲ್ಲಿ ನಿಲಿ ಜೆರ್ಸಿ ತೊಟ್ಟ ಭಾರತ ತಂಡದ ಆಟಗಾರರು ಪ್ರಶಸ್ತಿ ಪಡೆದಿದ್ದರು. ಈ ಬಾರಿ ಆರೆಂಜ್ ಜೆರ್ಸಿಯಲ್ಲಿ ಭಾರತದ ಲಕ್ ಖುಲಾಯಿಸಿ ಭಾರತ ೫೧ ವರ್ಷಗಳ ನಂತರ ಮತ್ತೇ ವಿಶ್ವಕಪ್ ಗೆದ್ದೀತೇ? ಎಂದು ಭಾರತ ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ೧೫ ದಿನಗಳ ನಂತರ ನೆದರಲೆಂಡ್ ದೇಶದಲ್ಲಿ ವಿಶ್ವಕಪ್ ಹಾಕಿ ನಡೆಯುತ್ತಿದೆ.


