ಗ್ಲಾಸ್ಗೋವ್(ಸ್ಕಾಟ್ಲೆಂಡ್): ಇಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೇ ಮೂರು ಚಿನ್ನದ ಪದಕಗಳೊಂದಿಗೆ ಪದಕಗಳ ಪಟ್ಟಿಯನ್ನು ೩೯ ಕ್ಕೆ ಹಿಗ್ಗಿಸಿಕೊಂಡಿದೆ.
ಗ್ಲಾಸ್ಗೋವ್‌ದಲ್ಲಿ ಮುಕ್ತಾಯದ ಹಂತದಲ್ಲಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಮತ್ತೇ ಮೂರು ಚಿನ್ನ ಸೇರಿ ಒಟ್ಟು ೬ ಪದಕಗಳನ್ನು ಹೊಸದಾಗಿ ಪಡೆದು ಪದಕಗಳ ಪಟ್ಟಿಯನ್ನು ೩೯ ಕ್ಕೆ ತಂದು ನಿಲ್ಲಿಸಿದೆ. ಇದಲ್ಲದೇ ಪದಕಗಳ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿ ಮುಂದುವರೆದಿದೆ.


