ಚಿಟಗುಪ್ಪ:ಬಿಎಸ್‌ಎಸ್‌ಕೆ ಕಾರ್ಖಾನೆ ಹರಾಜು ಮಾಡಿದರೆ ಕಾರ್ಖಾನೆಯ ಎದುರುಗಡೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ತಾಲ್ಲೂಕು ಪಂಚಾಯತ ಮಾಜಿ ಸದಸ್ಯರು ಹಾಗೂ ರೈತ ಮುಖಂಡರೂ ಆದ ಶ್ರೀಮಂತ ಪಾಟೀಲ ತಾಳಮಡಗಿ ಎಚ್ಚರಿಕೆ ನೀಡಿದರು.ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.ಬಿಎಸ್‌ಎಸ್‌ಕೆ ಕಾರ್ಖಾನೆ ಆರಂಭಿಸಿದ್ದು ರೈತರ ಷೇರು ಹಣದಿಂದ.ಕಾರ್ಖಾನೆಯ ಮೂಲ ಮಾಲೀಕರು ರೈತರು.ರೈತ ಷೇರುದಾರರ ಗಮನಕ್ಕೆ ತರದೇ ಹರಾಜು ಪ್ರಕ್ರಿಯೆ ಮಾಡಿದರೆ ರೈತರಿಗೆ ಅವಮಾನ ಮಾಡಿದಂತಾಗುತ್ತದೆ.ಸಾವಿರಾರು ಕಬ್ಬು ಬೆಳೆಗಾರರ ಮತ್ತು ಕಾರ್ಮಿಕರ ಜೀವನಕ್ಕೆ ಈ ಕಾರ್ಖಾನೆ ಆಧಾರವಾಗಿದೆ.ಹೀಗಾಗಿ ಸರ್ಕಾರ ಮಧ್ಯೆ ಪ್ರವೇಶಿಸಿ ಕಾರ್ಖಾನೆ ಪುನರಾರಂಭಗೊಳಿಸಬೇಕು.
ಒಂದು ವೇಳೆ ಹಜಾರು ಮಾಡಲೇ ಬೇಕು ಎನ್ನುವ ಉದ್ದೇಶ ಹೊಂದಿದ್ದರೆ ಮೊದಲು ರೈತರ ಷೇರು ಹಣ ಹಾಗೂ ಕಾರ್ಮಿಕರ ಬಾಕಿ ವೇತನವನ್ನು ಪಾವತಿಸಬೇಕು.ರೈತರನ್ನು ಕಡೆಗಣಿಸಿ ಹರಾಜುಗೊಳಿಸಿದರೆ ಕಾರ್ಖಾನೆ ಎದುರುಗಡೆ ಸಾವಿರಾರು ರೈತರನ್ನು ಸೇರಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


