ರಾಮದುರ್ಗ :ತಾಲೂಕಿನ ಸುನ್ನಾಳ ಗ್ರಾಮ ಪಂಚಾಯಿತಿಯಲ್ಲಿ ಇಂದು ಜಾಬ್ ಕಾರ್ಡ್ ಮೇಳಕ್ಕೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹಮ್ಮದ್ ಇಜಾನ ಸುಬೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಹೊಸದಾಗಿ ವಿಬಿ ಜಿ, ರಾಮ ಜಿ, ಯೋಜನೆಯಡಿ ರಿಜಿಸ್ಟರ್ ಮಾಡಿಕೊಂಡ ಕೂಲಿಕಾರ ಮಹಿಳೆಯರಿಗೆ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು,
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ತಾ ಪಂ ಇಓ ಗ್ರಾಮೀಣ ಪ್ರದೇಶದ ಉದ್ಯೋಗದ ಅಗತ್ಯವಿರುವ ಅರ್ಹ ಕುಟುಂಬಗಳು ಹಾಗೂ ವಿಶೇಷ ಸೌಲಭ್ಯಕ್ಕೆ ಒಳಪಡುವವರು ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಯೋಜನೆ ಕುರಿತು ಮಾಹಿತಿ ಪಡೆದುಕೊಂಡು ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಇಜಾನ ಸುಬೂರವರು ತಿಳಿಸಿದರು,
ಜಾಬ್ ಕಾರ್ಡ್ ಮೇಳವನ್ನು ಯಶಸ್ವಿಗೊಳಿಸಿ ಸ್ಥಳದಲ್ಲಿ ಉಪಸ್ಥಿತರಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಿಗೆ ಇನ್ನೂ ಹೆಚ್ಚಿನ ಗ್ರಾಮೀಣ ಅರ್ಹ ಫಲಾನುಭವಿಗಳಿಗೆ ಉದ್ಯೋಗ ಗ್ಯಾರಂಟಿ ಕಾರ್ಡಗಳನ್ನು ವಿತರಿಸಲು ತಿಳಿಸಿದರು, ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರಿಗೆ ಕೆಲಸವನ್ನು ಒದಗಿಸಲು ಗ್ರಾಮ ಪಂಚಾಯತಿ ಸಿಬ್ಬಂದಿಯವರಿಗೆ ಸೂಚಿಸಿದರು,
ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾಉ) ಸೋಮರೆಡ್ಡಿ ಹೊಂಗಲ್ ಮಾತನಾಡಿ ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜಗಾರ ಆ್ಯಂಡ ಆಜೀವಿಕ ಮಿಷನ್ ಗ್ರಾಮೀಣ ಯೋಜನೆ ಅಡಿಯಲ್ಲಿ ಅಗಸ್ಟ್ ೧೫ ರಿಂದ ಸೆಪ್ಟೆಂಬರ್ ೧೫ ರವರೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜಾಬ್ ಕಾರ್ಡ್ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆ ಅಡಿ ವಿಶೇಷ ಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ರೋಜಗಾರ ಕಾರ್ಡ್ ನೀಡುವ ಮೂಲಕ ವೈಯಕ್ತಿಕವಾಗಿ ೧೨೫ ದಿನಗಳ ಕೂಲಿ ಉದ್ಯೋಗ ಕೊಡಲಾಗುವುದು ಅಲ್ಲದೆ ವಿಶೇಷ ಚೇತನರು ಹಾಗೂ ೬0 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಗರ್ಭಿಣಿ ಮಹಿಳೆಯರಿಗೆ ಕೆಲಸದ ಸಂದರ್ಭದಲ್ಲಿ ೫0% ರಷ್ಟು ರಿಯಾಯಿತಿ ನೀಡಲಾಗುತ್ತದೆ, ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ ೧೨೫ ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತದೆ. ಪ್ರತಿಯೋಬ್ಬ ಕೂಲಿ ಕಾರ್ಮಿಕರಿಗೆ ದಿನಕ್ಕೆ ೩೮೨ ರೂ. ಕೂಲಿ ಮೊತ್ತ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಯೋಜನೆಯ ಸದೂಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿ ಜಾಬ್ ಕಾರ್ಡ ಇಲ್ಲದ ಕುಟುಂಬಸ್ಥರು ಜಾಬ್ ಕಾರ್ಡ ಮೇಳದ ಅಭಿಯಾನದಡಿ ಗ್ರಾಮ ಪಂಚಾಯತ್ ಭೇಟಿ ನೀಡಿ ಜಾಬ್ ಕಾರ್ಡ ಪಡೆಯಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಲರಾಮ ಲಮಾಣಿ,ಐಇಸಿ ಸಂಯೋಜಕ ಕಲ್ಮೇಶ ಹಗೆದ್, ತಾಂತ್ರಿಕ ಸಹಾಯಕ ಆನಂದ್ ನರಗುಂದ,ಬಿಎಫ್ ಟ ರುದ್ರಪ್ಪ ಸಾವಳಗಿ, ಗ್ರಾಮ ಕಾಯಕ್ ಮಿತ್ರ ಶ್ರೀಮತಿ ಭಾರತಿ ಎಸ್ ಮಾಳಿ, ಮೇಟಗಳು, ಕೂಲಿ ಕಾರ್ಮಿಕರು ಸೇರಿದಂತೆ ಪಂಚಾಯತ ಸಿಬ್ಬಂದ್ದಿಗಳು ಹಾಜರಿದ್ದರು.
ವರದಿ: ಮಂಜುನಾಥ ಕಲಾದಗಿ


