Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುರುಮಠಕಲ್ ಪಟ್ಟಣದಲ್ಲಿ ಇಂಧನ ಸಂಕಷ್ಟ: ಪೆಟ್ರೋಲ್-ಡೀಸೆಲ್ ಇಲ್ಲದೆ ವಾಹನ ಸವಾರರ ಪರದಾಟ

Advertisement

ಗುರುಮಠಕಲ್ : ಪಟ್ಟಣದಲ್ಲಿ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿಲ್ಲದ ಕಾರಣ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟು ವೀಲರ್ ಹಾಗೂ ಫೋರ್ ವೀಲರ್ ವಾಹನ ಸವಾರರು ಇಂಧನಕ್ಕಾಗಿ ಒಂದು ಬಂಕ್‌ನಿಂದ ಮತ್ತೊಂದು ಬಂಕ್‌ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೇ ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಿರುವ ಹಿನ್ನೆಲೆ ಅನೇಕ ಕುಟುಂಬಗಳು ಕಾರ್ಯಕ್ರಮಗಳಿಗೆ ತೆರಳಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿವೆ. ಇಂಧನ ಕೊರತೆಯಿಂದ ಜನರು ತಮ್ಮ ಅಗತ್ಯ ಕಾರ್ಯಗಳನ್ನು ಕೂಡ ನಡೆಸಲಾಗದೆ ಪರದಾಡುತ್ತಿದ್ದಾರೆ.

news_1778750404_0_984.webp

 

ಪಟ್ಟಣದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ “ಇಂಧನ ಲಭ್ಯವಿಲ್ಲ” ಎಂಬ ಫಲಕಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಕೆಲ ವಾಹನ ಸವಾರರು ಗಂಟೆಗಳ ಕಾಲ ಕಾಯುತ್ತಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಸಿಗದೆ ನಿರಾಶರಾಗಿ ಹಿಂದಿರುಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಇಂಧನ ಕೊರತೆಯಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ವ್ಯಾಪಾರಿಗಳು ಹಾಗೂ ರೈತರು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೈಲ ಕಂಪನಿಗಳು ಕ್ರಮ ಕೈಗೊಂಡು ಗುರುಮಠಕಲ್ ಪಟ್ಟಣಕ್ಕೆ ಸಮರ್ಪಕ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ : ರವಿ ಬುರನೋಳ್ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುರುಮಠಕಲ್ ಪಟ್ಟಣದಲ್ಲಿ ಇಂಧನ ಸಂಕಷ್ಟ: ಪೆಟ್ರೋಲ್-ಡೀಸೆಲ್ ಇಲ್ಲದೆ ವಾಹನ ಸವಾರರ ಪರದಾಟಮದ್ಯ ಖರೀದಿಗೆ ಕನಿಷ್ಠ 21 ವರ್ಷ ಕಡ್ಡಾಯ : ವಿಜಯ್ ಸರ್ಕಾರ ಅಧಿಕೃತ ಆದೇಶಕಾಂಗ್ರೆಸ್ ಸರ್ಕಾರ ಧರ್ಮಗಳನ್ನು ಒಡೆದು ಆಳುವ ನೀತಿಗೆ ಕೈಹಾಕಿದೆ : ಪ್ರಹ್ಲಾದ್ ಜೋಶಿ ವಾಗ್ದಾಳಿಕೇಸರಿ ಶಾಲು ಧರಿಸುವಂತಿಲ್ಲ, ಹಿಜಾಬ್, ಜನಿವಾರ ಧರಿಸಬಹುದು : ಸಿದ್ದರಾಮಯ್ಯಭಾರಿ ಗಾಳಿ-ಮಳೆಗೆ ಹಾರಿಹೋದ ಶಾಲೆಯ ಮೇಲ್ಟಾವಣಿ:  ಕಾಗವಾಡ ಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಹಾನಿ    ಸಾಯಿ ಮಂದಿರದಲ್ಲಿ ಕೋಟಿ ಕೋಟಿ ಹಗರಣ ?ಚಿಕ್ಕೋಡಿ ಹಾಗೂ ನಿಪ್ಪಾಣಿ ಸುತ್ತಮುತ್ತಲು ಮಳೆರಾಯನ ಅಬ್ಬರಸೆಪ್ಟೆಂಬರ್ 2026ರವರೆಗೆ ಸಕ್ಕರೆ ರಫ್ತು ನಿಷೇಧ : ಕೇಂದ್ರ ಸರ್ಕಾರ ಆದೇಶಉತ್ತರ ಪ್ರದೇಶದ ಬಿರುಗಾಳಿ ಸಹಿತ ಮಳೆ : 54 ಮಂದಿ ದುರ್ಮರಣ ಭಾರೀ ಮಳೆ, ಬಿರುಗಾಳಿ ಧೂಳಿನಿಂದ ೩೩ ಜನರ ಸಾವು