ವಿಕ್ಟೋರಿಯಾ: ಪರಿಸರ ಸಂರಕ್ಷಣೆ, ಹಸಿರು ದೃಷ್ಟಿಕೋನ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ತೋರಿದ ಜಾಗತಿಕ ನಾಯಕತ್ವಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಶೆಲ್ಸ್ (Seychelles) ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' (Guardian of the Blue Horizon) ಪ್ರಶಸ್ತಿಯನ್ನು ನೀಡಿ ಭಾನುವಾರ ಗೌರವಿಸಿದೆ.
ಸುಸ್ಥಿರ ಆರ್ಥಿಕ ಬೆಳವಣಿಗೆ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ಸುದೀರ್ಘ ಕಾಲದಿಂದ ನೀಡುತ್ತಿರುವ ಆದ್ಯತೆಯನ್ನು ಶ್ಲಾಘಿಸಿ ಈ ಪ್ರಶಸ್ತಿ ಪ್ರಕಾನ ಮಾಡಲಾಗಿದೆ.
ಪ್ರಧಾನಿ ಮೋದಿಗೆ ಒಲಿದ ಸಾಲು ಸಾಲು ಜಾಗತಿಕ ಗೌರವಗಳು
ಪರಿಸರ ಕ್ರಿಯಾ ಯೋಜನೆ ಹಾಗೂ ಸುಸ್ಥಿರ ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು ನೀಡಿದ ಕೊಡುಗೆಗಾಗಿ ಜಾಗತಿಕ ಮಟ್ಟದಲ್ಲಿ ಲಭಿಸುತ್ತಿರುವ ಗೌರವಗಳ ಸರಣಿಯಲ್ಲಿ ಇದು ಹೊಸ ಸೇರ್ಪಡೆಯಾಗಿದೆ.


