LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭಾರತವನ್ನು ಸಂಕಷ್ಟದಿಂದ ಪಾರುಮಾಡಿದ ಗಿಲ್, ರಾಹುಲ್ ಪಾಲುಗಾರಿಕೆ

Advertisement
ಮ್ಯಾಂಚೆಸ್ಟರ್ : ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮಾನ್ ಗಿಲ್ ಅವರ ಮುರಿಯದ ನಾಲ್ಕನೇ ವಿಕೆಟ್ ಗೆ ಕೂಡಿ ಹಾಕಿದ 174 ರನ್ ಪಾಲುಗಾರಿಕೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಲು ಉತ್ತಮ ಯತ್ನ ನಡೆಸಿದೆ.

ಎಮಿರೆಟ್ಸ್ ಓಲ್ ಟ್ರೆಪಿಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಾಟ ಮುಗಿದಾಗ ಭಾರತ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 174 ರನ್ ಗಳಿಸಿದ್ದು, ಇಂಗ್ಲೆಂಡ್ ನ ಮುನ್ನಡೆಯನ್ನು ಅಳಿಸಿ ಹಾಕಲು ಉಳಿದ ಎಂಟು ವಿಕೆಟ್ ಗಳಿಂದ ಇನ್ನು 137 ರನ್ ಗಳಿಸಬೇಕಿದೆ. ಆರಂಭ ಆಟಗಾರನಾಗಿ ಆಡಲು ಬಂದ ಕೆ.ಎಲ್. ರಾಹುಲ್ 87 ಹಾಗೂ ನಾಯಕ ಶುಭಮಾನ್ ಗಿಲ್ 78 ರನ್ ಗಳಿಸಿ ಕ್ರೀಸ್ ಬಳಿ ಇದ್ದರು.

ಇದಕ್ಕೆ ಮುನ್ನ ಭಾರತದ ಮೊದಲ ಇನ್ನಿಂಗ್ಸ್  ಮೊತ್ತಕ್ಕೆ ಉತ್ತರವಾಗಿ ಆಡಿದ  ಇಂಗ್ಲೆಂಡ್ ತನ್ನ ಮೊದಲ ಸರದಿಯಲ್ಲಿ 669 ರನ್ ಗಳಿಸಿತ್ತು. ಇದರಿಂದ ಭಾರತ ತಂಡ 311 ರನ್ ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ತನ್ನ ದ್ವಿತೀಯ ಸರದಿ ಆರಂಭಿಸಿತು. ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ರನ್ ಖಾತೆ ತೆರೆಯದೇ 2 ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಇದಾದ ನಂತರ ನಾಯಕ ಶುಭಮಾನ್ ಗಿಲ್ ಹಾಗೂ ಕೆ.ಎಲ್. ರಾಹುಲ್ ಜವಾಬ್ದಾರಿ ಅರಿತು ಆಟವಾಡಿ ತಂಡವನ್ನು ಒಂದು ಹಂತಕ್ಕೆ ಸಂಕಷ್ಟದಿಂದ ಪಾರು ಮಾಡಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ : ಪ್ರಿಯಾಂಕ್ ಖರ್ಗೆಗೆ ಬಿ. ಎಲ್ ಸಂತೋಷ್ ತಿರುಗೇಟು ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ವಾಪಸ್ ಪಡೆಯುವುದಿಲ್ಲ : ಯು.ಟಿ. ಖಾದರ್ ಸ್ಪಷ್ಟನೆಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್ ಬೂಮ್ರಾ- ಸಾಯಿ ಸುದರ್ಶನ ಸಂಪರ್ಕದಲ್ಲಿದ್ದೇವೆ: ಶುಭಮಾನ್ ಗಿಲ್ಯುವ ಸಮುದಾಯದ ದಾರಿ ತಪ್ಪಿಸಲು ನನ್ನ ಪದ ದುರ್ಬಳಕೆ : ಸಿಜೆಐ ಸೂರ್ಯಕಾಂತ್‌ ಕಳವಳ ಸಾರ್ವಜನಿಕ ಸ್ಥಳಗಳ ಬಳಕೆ ನಿಯಮ RSS ವಿರುದ್ಧವಲ್ಲ : ಪ್ರಿಯಾಂಕ್ ಖರ್ಗೆ ತಿರುಗೇಟು ನಿನ್ನ ಏಳ್ಗೆಗೆ ನೀನೆ ಶಿಲ್ಪಿ : ಜಗನ್ನಾಥನೇತಾಜಿ ಶಿಕ್ಷಣ ಸಂಸ್ಥೆಯಿಂದ 80 ಮೀ.ಉದ್ದದ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆರಾಜ್ಯದಲ್ಲಿ ಪಡಿತರ ಚೀಟಿ ಪರಿಷ್ಕರಣೆ ತಾತ್ಕಾಲಿಕ ಸ್ಥಗಿತ : ಸಚಿವ ರಿಜ್ವಾನ್ ಅರ್ಷದ್ಇಡಿ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ : ಶಿವಾನಂದ ನೀಲಣ್ಣವರ ಅರೆಸ್ಟ್