LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಗೋಲ್ಡ್ ಸ್ಮಗ್ಲಿಂಗ್ ಕೇಸ್ : ನಟಿ ರನ್ಯಾ ರಾವ್ ಗೆ ಬರೋಬ್ಬರಿ ₹89 ಕೋಟಿ ದಂಡ 

Advertisement

ಬೆಂಗಳೂರು: ಅಕ್ರಮ ಚಿನ್ನ ಸಾಗಾಟ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಭಾರೀ ಶಾಕ್ ನೀಡಿದ್ದು, ಬರೋಬ್ಬರಿ ₹89 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ. 

ಕಸ್ಟಮ್ಸ್ ಅಧಿಕಾರಿ ಸಂದೀಪ್ ಅವರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ದಂಡದ ಮಾಹಿತಿಯನ್ನು ಈಗಾಗಲೇ ರನ್ಯಾ ರಾವ್ ಅವರಿಗೆ ತಲುಪಿಸಲಾಗಿದೆ.

2024ರ ಮಾರ್ಚ್ 7 ರಿಂದ 2025ರ ಫೆಬ್ರವರಿವರೆಗಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 113 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಕೃತ್ಯದಲ್ಲಿ ನಟಿಯ ಭಾಗಿಯಾಗುವಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ದುಬೈನಿಂದ ಅಕ್ರಮವಾಗಿ ಚಿನ್ನ ತಂದು ಭಾರತದಲ್ಲಿ ಜಾಲ ವಿಸ್ತರಿಸಿದ್ದ ರನ್ಯಾ ರಾವ್, ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ವ್ಯವಹಾರ ನಡೆಸಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿದ ಸುದೀರ್ಘ ಕಾರ್ಯಾಚರಣೆ ಹಾಗೂ ಬಂಧನದ ಬಳಿಕ ಈ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲದ ಸಂಪೂರ್ಣ ಜಾತಕ ಹೊರಬಂದಿದ್ದು, ಇಲಾಖೆಯು ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಿರುವುದು ತನಿಖೆಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಮಾರು 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ರ: ಡಿ.ಕೆ.ಶಿವಕುಮಾರ್ ಗಣಪತಿ ದರ್ಶನ ವೇಳೆ ಬದಲಾಯ್ತು ಮಗುವಿನ ಭವಿಷ್ಯ : 9 ಕೋಟಿ ರೂ. ಚಿಕಿತ್ಸಾ ವೆಚ್ಚ ಭರಿಸಲು ತೀರ್ಮಾನ ಆನಂತ್‌ ಅಂಬಾನಿ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ಭಾರತ ಪೈನಲ್ ಗೆ ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR ತುರ್ತು ಪರಿಹಾರ ಕೋರಿ ಕೇಂದ್ರ ಗೃಹ ಮತ್ತು ಕೃಷಿ ಸಚಿವರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಪತ್ರ ಸಮಾಜದಲ್ಲಿ ವೃದ್ದಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ: ಹುಸೇನಪ್ಪ ಕುರ್ಡಿಮಳೆ-ಬೆಳೆ ಸಮೃದ್ಧಿಗಾಗಿ ಸರ್ವಧರ್ಮಗಳ ಸಾಮೂಹಿಕ ವಿಶೇಷ ಪ್ರಾರ್ಥನೆ: ಶಾಸಕ ಹಂಪಯ್ಯ ನಾಯಕಮಳೆ-ಬೆಳೆ ಸಮೃದ್ಧಿಗಾಗಿ ಸರ್ವಧರ್ಮಗಳ ಸಾಮೂಹಿಕ ವಿಶೇಷ ಪ್ರಾರ್ಥನೆ: ಶಾಸಕ ಹಂಪಯ್ಯ ನಾಯಕವಿನಯ್ ಕುಲಕರ್ಣಿಗೆ ಬಿಗ್ ಶಾಕ್ : ಜಾಮೀನು ರದ್ದುಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆಎಲ್ಲೆಲ್ಲಿ ಫಾರ್ಮ್ 7 ಕೊಟ್ಟಿದ್ದಾರೆ 12 ಗಂಟೆ ಒಳಗೆ ಮಾಹಿತಿ ಕೊಡಿ : ಜನರಿಗೆ ಡಿಕೆಶಿ ಸಂದೇಶ