ಬೆಂಗಳೂರು : ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಂಗಾರ ಪ್ರಿಯರಿಗೆ (Gold Lovers) ಕೊನೆಗೂ ನಿರಾಳತೆಯ ಸುದ್ದಿ ಸಿಕ್ಕಿದೆ.
ಜಾಗತಿಕ ಮಟ್ಟದಲ್ಲಿ ಇರಾನ್ - ಇಸ್ರೇಲ್ ಯುದ್ಧದ ಕಾರ್ಮೋಡಗಳು ತಿಳಿಯಾಗುತ್ತಿದ್ದಂತೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ (Gold & Silver) ದರ ಭಾರಿ ಇಳಿಕೆಯತ್ತ ಮುಖ ಮಾಡಿದೆ.
ಕಳೆದ ಕೇವಲ ಒಂದು ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 5,000 ರೂ. ವರೆಗೆ ಕುಸಿತ ಕಂಡುಬಂದಿರುವುದು ಗ್ರಾಹಕರಲ್ಲಿ ಹರ್ಷ ತಂದಿದೆ.
ಇಂದಿನ ಚಿನ್ನದ ದರ ವಿವರ (10 ಗ್ರಾಂ ಗೆ)
ಇರಾನ್ - ಇಸ್ರೇಲ್ ಸಂಘರ್ಷ ತಿಳಿಯಾದ ಬೆನ್ನಲ್ಲೇ ಚಿನ್ನದ ಗ್ರಾಫ್ ಗಣನೀಯವಾಗಿ ಕೆಳಗಿಳಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಆದ ಬದಲಾವಣೆ ಹೀಗಿದೆ:
ಚಿನ್ನದ ಪ್ರಕಾರ ನಿನ್ನೆಯ ದರ (10 ಗ್ರಾಂ) ಇಂದಿನ ದರ (10 ಗ್ರಾಂ) ಇಳಿಕೆಯಾದ ಮೊತ್ತ
24 ಕ್ಯಾರಟ್ (ಅಪರಂಜಿ) 1,42,910 ರೂ. 1,40,130 ರೂ. 2,780 ರೂ.
22 ಕ್ಯಾರಟ್ (ಆಭರಣ) 1,31,000 ರೂ. 1,28,450 ರೂ. 2,550 ರೂ.
ಇಂದು 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 14,030 ರೂ. ಹಾಗೂ 22 ಕ್ಯಾರಟ್ ಚಿನ್ನದ ಬೆಲೆ 12,845 ರೂ. ತಲುಪಿದೆ.


