LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೂಲಭೂತ ಸೌಲಭ್ಯಗಳಿಲ್ಲದೇ ಸೊರಗಿದ ಗುರುಮಠಕಲ್ ನಾಡ ಕಛೇರಿ

Advertisement
ಗುರುಮಠಕಲ್ : ತಾಲೂಕಿನ ಗುರುಮಠಕಲ್ ನಾಡ ಕಛೇರಿಯಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯ ಪ್ರಥಮ ಚಿಕಿತ್ಸೆ ಮಾಹಿತಿ ಫಲಕಗಳು- ಸೂಕ್ತ ಸೇವೆಯ ವಿವರ ಇಲ್ಲದೇ ಗುರುಮಠಕಲ್ ನಾಡ ಕಛೇರಿಯ ದೊರೆಯುವ ಕೆಲವು ಪ್ರಮಾಣ ಪತ್ರಗಳು ಮಾಡಿಕೊಳ್ಳಲು ದಳ್ಳಾಳಿಗಳಿಂದ ಮಾತ್ರ ಸಾಧ್ಯವಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತೆವಾಗಿದೆ ಸುತ್ತಮುತ್ತಲಿನ ಗ್ರಾಮಗಳ ಜನರು ನಿತ್ಯವೂ ಅಲೆಯುವಂತಾಗಿದೆ ಪರಸ್ಥಿತಿ ಆಗಿದೆ ಇದನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಆಗ್ರಹ ಮಾಡಿದ್ದಾರೆ ಜಯ ಕರ್ನಾಟಕ ಸಂಘಟನೆ.

ನಾಡ ಕಚೇರಿಯ ಮುಂಭಾಗದ ಯಾವುದೆ ಹಾಸನಗಳ ವ್ಯವಸ್ಥೆ ಇಲ್ಲದೆ ಸುಡು ಬಿಸಿಲಲ್ಲಿಯೇ ನಿಂತುಕೊಂಡು ಅವರವರ ಕೆಲಸಗಳನ್ನು ಮಾಡಿಕೊಳ್ಳಬೇಕು ಹಾಗೂ ಕಛೇರಿಯ ಆವರಣವು ಕಸದ ತ್ಯಾಜ್ಯ ಹಾಗೂ ಮದ್ಯದ ತ್ಯಾಜ್ಯಗಳಿಂದ ಗಬ್ಬು ನಾರುತ್ತಿದೆ ಕಸದಿಂದ ಕೂಡಿದ ವಾತಾವರಣದಲ್ಲೇ ಚಿಕ್ಕ ಮಕ್ಕಳ ಜೊತೆ ಮೂಗು ಮುಚ್ಚಿಕೊಂಡು ಕಛೇರಿ ಕೆಲಸವನ್ನು ಮಾಡಿಸಿಕೊಂಡು ಹೋಗುವ ದುಃಸ್ಥಿತಿ ಎದುರಾಗಿದೆ.



ಉದ್ಘಾಟನೆಗೊಂಡು ಹಲವು ವರ್ಷಗಳೇ ಕಳೆದರೂ ಕೆಲವು ಜಿಲ್ಲಾಧಿಕಾರಿಗಳು ಬೇಟಿ ನೀಡಿದರೂ ಕಟ್ಟಡದ ದುರಸ್ತಿ ಸುತ್ತುಗೋಡೆ ಸೂಕ್ತ ಶೌಚಾಲಯವಿಲ್ಲದ ಶುದ್ಧ ಕುಡಿಯುವ ನೀರು ಇಲ್ಲ ಸುತ್ತ ಮುತ್ತ ಗಬ್ಬು ವಾಸನೆ ಬರುತ್ತಿದೆ ಇದರಿಂದಾಗಿ ಸೊಳ್ಳೆಗಳು ಹೆಚ್ಚಿದ್ದು ಮಾರಕ ಕಾಯಿಲೆಗಳ ಭೀತಿಯು ಎದುರಾಗಿದೆ
ಸೂಕ್ತ ಭದ್ರತೆಯಿಲ್ಲದ ಕಾರಣ ಮದ್ಯಪಾನೀಯರು ಇಲ್ಲಿಯೇ ಕುಡಿದು ಬಿಸಾಡುತ್ತಿದ್ದು ಈ ಬಗ್ಗೆ ಸಂಬಂದಿಸಿದ ಇಲಾಖೆಯು ಗಮನಹರಿಸಿ ಸಾರ್ವಜನಿಕರಿಗೆ ಶುದ್ಧ ವಾತಾವರಣವನ್ನು ನಿರ್ಮಿಸಬೇಕೆಂಬುದು ಜಯ ಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ರವಿ ಬುರನೋಳ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ