LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಒಳ ಮೀಸಲಾತಿ ಜಾರಿಗೆಗೋಳಿಸಬೇಕೆಂದು ಗುರುಮಠಕಲ್ ಮಾದಿಗ ಸಮಾಜ ಪ್ರತಿಭಟನೆ.

Advertisement
ಗುರುಮಠಕಲ್ : ಪಟ್ಟಣದಲ್ಲಿ ನ್ಯಾಯಬದ್ಧವಾದ ಹಾಗೂ ಸಂವಿಧಾನಾತ್ಮಕವಾದ ಒಳಮೀಸಲಾತಿ ಜಾರಿಗೊಳಿಸುವಂತೆ ತಾಲೂಕು ಮಾದಿಗ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚನ್ನಾಮಲ್ಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ 12 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾವಿರಾರು ಸಂಖ್ಯೆಯ ಮಾದಿಗ ಸಮುದಾಯದ ಮುಖಂಡರು ಘೋಷಣೆ ಮೂಲಕ ಜಾಥಾ ತೆರಳಿ ಪಟ್ಟಣದ ಬಸವೇಶ್ವರ ವೃತ್ತ ಹತ್ತಿರ ರಸ್ತೆ ಮಾರ್ಗ ಮತ್ತು ಹೈದರಾಬಾದ್ ಮುಖ್ಯ ರಸ್ತೆ ಬಂದ್ ಮಾಡಿ ಅಲ್ಲಿನ ಮಾದಿಗ ಸಮುದಾಯದ ಮುಖಂಡರುಗಳು ಒಳ ಮೀಸಲಾತಿ ವಿರೋಧಿಗಳಾಗಿರತಕ್ಕಂತವರು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರಾಗಳರಾದ ಎಚ್ ಸಿ ಮಹದೇವಪ್ಪ ವಿರುದ್ಧ ಗುಡಿಗಿದ ನೀವು ಮುಂದಿನ ದಿನದಲ್ಲಿ ಒಲಮೀಸಲಾತಿ ಜಾರಿಗೆ ಮಾಡದಿದ್ದರೆ ರಕ್ತಕ್ರಾಂತಿ ಆಗುತ್ತದೆ ಎಂದು ಕೆ ಬಿ ವಾಸು ಅವರು ಗುಡಿಗಿದರು.

ಈ ಸಂದರ್ಭದಲ್ಲಿ ಕೆ ದೇವದಾಸ ಬಿ ಜೆ ಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಾತನಾಡಿ ರಾಜ್ಯ ಸರ್ಕಾರವು ಸುಮಾರು 56,432 ಬಿಲ್ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸರಿಯಷ್ಟೆ. ಆದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಬಡ್ತಿ ಮೀಸಲಾತಿಯನ್ನು ಸರ್ಕಾರಿ ನೌಕರರಿಗೂ ಅನ್ವಯಿಸಿ ಅನುಷ್ಠಾನಗೊಳಿಸಬೇಕು ರಾಜ್ಯ ಸರ್ಕಾರ ಇಡೀ ಕರ್ನಾಟಕದಲ್ಲಿ ನಮ್ಮ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡ್ತಾ ಇದೆ ಮಾದಿಗ ಸಮುದಾಯಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲಿ ನಮಗೆ ಸಿದ್ದರಾಮಯ್ಯ ಸರ್ಕಾರ ನಮಗೆ ಅನ್ಯಾಯ ಮಾಡಿ ಮೋಸ ಮಾಡ್ತಾ ಇದೆ ಮೂವತ್ತು ವರ್ಷಗಳ ಹೋರಾಟಗಳನ್ನು ಮಾಡಿಕೊಂಡು ಒಳ ಮೀಸಲಾತಿ ಜಾರಿಗೆ ಆಗಬೇಕೆಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಒಳ ಮೀಸಲಾತಿ ಜಾರಿಗೆ ಮಾಡದಿದ್ದರೆ ಮುಂದಿನ ದಿನದಲ್ಲಿ ರಕ್ತಪಾತ ವಾಗುತ್ತದೆ ಎಂದು ಎಚ್ಚರಿಕೆ ನೀಡಿ ಈಗ ನಮ್ಮ ಮಾದಿಗ ಸಮುದಾಯ ಎಚ್ಚೆತ್ತುಕೊಂಡಿದೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ವಿರುದ್ಧ ಬೀದಿಗಳಿಗೆ ಇಳಿದು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು ಆಶಾನ್ನ ಬುದ್ಧ ಪುರಸಭೆ ಮಾಜಿ ಸದಸ್ಯರು. ಭೀಮಶಪ್ಪ ಗುಡಸೆ ಪುರಸಭೆ ಮಾಜಿ ಅಧ್ಯಕ್ಷ ಹನುಮಂತು ಶನಿವಾರಮ್ ಅಶೋಕ್ ಶನಿವಾರಮ್ kdss ಅಧ್ಯಕ್ಷ. ರವಿ ಬುರನೋಳ್ ಮಾದಿಗ ದಂಡೋರ ತಾಲೂಕು ಅಧ್ಯಕ್ಷ. ಭೀಮಶಪ್ಪ ಕೆಳಮನಿ ಮಾಣಿಕ್ ಮುಕ್ಕಿಡಿ ಡಾ.ಕೃಷ್ಣ ಚೇಪೆಟ್ಲಾ ಕಿಷ್ಟಪ್ಪ ಸೈಪೋಳ ಮಲ್ಲಿಕಾರ್ಜುನ ಸೈದಪೋಳ ಕರಣಪ್ಪ ಎಂ ಟಿ ಪಲ್ಲಿ ನಾಗೇಶ್ ಚಂಡರಿಕಿ ಗುಂಡೆಸ ಗಜಾರಕೋಟ ಇನ್ನು ಅನೇಕ ಮಾದಿಗ ಸಮಾಜದ ಮುಖಂಡರು ಮತ್ತು ಹೋರಾಟಗಾರರು ಭಾಗಿಯಾಗಿದ್ದರು.

ವರದಿ : ರವಿ ಬುರನೋಳ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ