
ರಾಜ್ಯದ್ಯಂತ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಮುಸ್ಲಿಮರು ಬಿತ್ತಿಪತ್ರ ಹಿಡಿದು ಕೇಂದ್ರ ಸರ್ಕಾರ ವಿರುದ್ಧ ಮೌನ ಪ್ರತಿಭಟನೆ ನಡೆಸಿ ಸುಮಾರು ಅರ್ಧ ಕಿಲೋ ಮೀಟರ್ ರವರೆಗೆ ಮಾನವ ಸರಪಳಿ ನಿರ್ಮಿಸಿ ವಕ್ಪ ತಿದ್ದುಪಡಿ ಕಾಯ್ದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಈ ಪ್ರತಿಭಟನೆಯಲ್ಲಿ ಸ್ಥಳೀಯ ಜನಪ್ರತಿನಿದಿಗಳು ಭಾಗವಹಿಸಿದ್ದರು ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಅಧ್ಯಕ್ಷರು ಮುಹಮ್ಮದ್ ಹುಸೇನ್, ಕಾರ್ಯದರ್ಶಿ ಶರ್ಫುದ್ದೀನ, ಹುದಾ ಮಸೀದಿಯ ಇಮಾಮರಾದ ಹಾಫಿಜ್ ಸೈಯದ್ ಉಸಾಮ, ಹುಸೇನ್ ಬಾಷಾ ನಿವೃತ್ತ ಶಿಕ್ಷಕರು, ವಸಿಂ ಸ್ವಾಲಿಡಾರಿಟಿ ಯುಥ್ ಮೂಮೆಂಟ್ ಜಿಲ್ಲಾ ಅಧ್ಯಕ್ಷ, ಮುಹಮ್ಮದ್ ಚೌದ್ರಿ, ನಯೀಮ್ ಪಾಶ ಚೌದ್ರಿ, ಮೌಲಾಸಾಬ, ಮಹೆಬೂಬ ಸಾಬ ಅತ್ತಾರ, ಬಾವುದ್ದೀನ್, ಆಲಂ ಬಾಷ ಚೌದ್ರಿ, ಮುಸ್ತಾಕ್, ಮುಹಮ್ಮದ್ ಮೇಸ್ತ್ರಿ, ಮಹೆಬೂಬ್ ಸಾಬ ಹಾಗೂ ಗೌಸ್ ಸಾಬ ಇನ್ಮಾದಾರ ಕಾಟಿಬೇಸ್, ಇನ್ನಿತರ ಹಲವಾರು ಜನರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ

