LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಕ್ಫ್ ತಿದ್ದುಪಡೆ ಕಾಯ್ದೆ ವಿರುದ್ಧ ಮಾನವ ಸರಪಳಿ!

Advertisement
ಸಿಂಧನೂರು:  ಜುಲೈ 4ರಂದು ನಗರದ ಮಜೀದ್ ಏ ಹುದಾ ಪಟೇಲ್ ವಾಡಿ ರಸ್ತೆ ಮುಂಭಾಗದಲ್ಲಿ ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿನೆ ನಡೆಸಿ ವಕ್ಫ್ ತಿದ್ದುಪಡಿ ಕಾಯ್ದೆ 2025 ವಾಪಾಸ್ ಪಡೆಯಲು ನಗರದ ಹಳೆಯ ಬಜಾರದವರಿಗೆ ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ವಕ್ಫಾ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ರದ್ದುಗೊಳಿಸಿ. ಭರವಸೆ ಅಲ್ಲ ನಿರಾಸೆ ರದ್ದುಗೊಳಿಸಿ ಎನ್ನುವ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ಪ್ರತಿಭಟಿಸಿದರು.


ರಾಜ್ಯದ್ಯಂತ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಮುಸ್ಲಿಮರು ಬಿತ್ತಿಪತ್ರ ಹಿಡಿದು ಕೇಂದ್ರ ಸರ್ಕಾರ ವಿರುದ್ಧ ಮೌನ ಪ್ರತಿಭಟನೆ ನಡೆಸಿ ಸುಮಾರು ಅರ್ಧ ಕಿಲೋ ಮೀಟರ್ ರವರೆಗೆ ಮಾನವ ಸರಪಳಿ ನಿರ್ಮಿಸಿ ವಕ್ಪ ತಿದ್ದುಪಡಿ ಕಾಯ್ದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಈ ಪ್ರತಿಭಟನೆಯಲ್ಲಿ ಸ್ಥಳೀಯ ಜನಪ್ರತಿನಿದಿಗಳು ಭಾಗವಹಿಸಿದ್ದರು.

ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಅಧ್ಯಕ್ಷರು ಮುಹಮ್ಮದ್ ಹುಸೇನ್, ಕಾರ್ಯದರ್ಶಿ ಶರ್ಫುದ್ದೀನ, ಹುದಾ ಮಸೀದಿಯ ಇಮಾಮರಾದ ಹಾಫಿಜ್ ಸೈಯದ್ ಉಸಾಮ, ಹುಸೇನ್ ಬಾಷಾ ನಿವೃತ್ತ ಶಿಕ್ಷಕರು, ವಸಿಂ ಸ್ವಾಲಿಡಾರಿಟಿ ಯುಥ್ ಮೂಮೆಂಟ್ ಜಿಲ್ಲಾ ಅಧ್ಯಕ್ಷ, ಮುಹಮ್ಮದ್ ಚೌದ್ರಿ, ನಯೀಮ್ ಪಾಶ ಚೌದ್ರಿ, ಮೌಲಾಸಾಬ, ಮಹೆಬೂಬ ಸಾಬ ಅತ್ತಾರ, ಬಾವುದ್ದೀನ್, ಆಲಂ ಬಾಷ ಚೌದ್ರಿ, ಮುಸ್ತಾಕ್, ಮುಹಮ್ಮದ್ ಮೇಸ್ತ್ರಿ, ಮಹೆಬೂಬ್ ಸಾಬ ಹಾಗೂ ಗೌಸ್ ಸಾಬ ಇನ್ಮಾದಾರ ಕಾಟಿಬೇಸ್, ಇನ್ನಿತರ ಹಲವಾರು ಜನರು ಇದ್ದರು.

ವರದಿ: ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ