LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾನು ಶಾಲೆಯಲ್ಲಿಯೇ ಮುಖ್ಯಮಂತ್ರಿ ಆಗಿದ್ದೆ ; ಸಚಿವ ಸ್ಥಾನ ವಂಚಿತ ಶಾಸಕ ಆರ್ ಬಿ ತಿಮ್ಮಾಪೂರ

Advertisement

ಬಾಗಲಕೋಟೆ : ನನ್ನೂರು ತಾಲೂಕಿನ ಉತ್ತೂರು  ನನ್ನ ಸ್ವಗ್ರಾಮ ಉತ್ತೂರಿನಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕಲಿತಿರುವೆ  ನಾನು ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರಿಂದ ನನ್ನನ್ನು ಶಾಲೆ ಮುಖ್ಯಮಂತ್ರಿಯಾಗಿ ಮಾಡಿದ್ದರು ಎಂದು ಶಾಸಕ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ತಮ್ಮ ಶಾಲಾ ದಿನದ ನೆನಪನ್ನು ಮಾಡಿಕೊಂಡರು.

ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ತಾಲೂಕಾಡಳಿತ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕ ದಿನೋತ್ಸವ ಸಮಿತಿ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಡಾ ರಾಧಾಕೃಷ್ಣನ ರವರ ಜನ್ಮದಿನದ ಅಂಗವಾಗಿ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಟ್ಟದ ಶಿಕ್ಷಕರ ದಿನೋತ್ಸವ-2026 ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶಿಕ್ಷಕರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು  ಇಂದಿನ ಸರ್ಕಾರಿ ಶಾಲಾ ಶಿಕ್ಷಕರು ಅಫ್ಡೇಟ್ ಆಗಬೇಕು ಹೊಸ ಹೊಸ ತಂತ್ರಜ್ಞಾನ  ವಿನೂತನ ಕೌಶಲ ಬ‍ಳಸಿಕೊಂಡು ಮಕ್ಕಳಿಗೆ ಪಾಠಬೋಧನೆ ಮಾಡಬೇಕು ಪಾಠಬೋಧನೆ ಜತೆಗೆ ಜೀವನ ಶಿಕ್ಷಣ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಜಾತಿ, ಮತ, ಧರ್ಮ, ಮೇಲು, ಕೀಳು ಎಂಬ ಭಾವನೆಯಿಂದ ಮಕ್ಕಳು ಹೊರಬರಬೇಕು ಅಂತಹ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕೆಂದು ಹೇಳಿದ  ಬಿಇಒ ಕಚೇರಿ ಮತ್ತು ಶಿಕ್ಷಕರ ಗುರುಭವನ ಶೀಘ್ರದಲ್ಲಿ ಕಟ್ಟಿಸಿಕೊಡುವದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ಆರ್  ನಿರಾಣಿ ಮಾತನಾಡಿ ಗುರುವಿನ ಮಹತ್ವ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ತಿಳಿಸಿಕೊಟ್ಟ ಅವರು ಗುಣಾತ್ಮಕ ಮತ್ತು ಮೌಲ್ಯಾಧರಿತ ಶಿಕ್ಷಣ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. 

ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪೀಡಿತ ಪ್ರದೇಶ ಎಂದು ಘೋಷಿಸಿ : ಶಾಸಕ ಶರಣಗೌಡ ಕಂದಕೂರ್ ಏಕಾಂಗಿ ಪ್ರತಿಭಟನೆ ಸರ್ಕಾರಿ ನಿವಾಸಕ್ಕಾಗಿ ಮಾಜಿ-ಹಾಲಿ ಮಂತ್ರಿಗಳ ಜಟಾಪಟಿ: ಮನೆ ಖಾಲಿ ಮಾಡಲು ಮಹದೇವಪ್ಪಗೆ ಬೈರತಿ ಸುರೇಶ್ ಒತ್ತಡಮೈಸೂರು ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ  ಶ್ರಾವಣ ಕೊನೆಯ ಸೋಮವಾರ ಸುಕ್ಷೇತ್ರ ದಕ್ಷಿಣ ಕಾಶಿ ಮಹಾಕೂಟ ನೂರಾರು ಭಕ್ತರು ಆಗಮನ ನಾನು ಶಾಲೆಯಲ್ಲಿಯೇ ಮುಖ್ಯಮಂತ್ರಿ ಆಗಿದ್ದೆ ; ಸಚಿವ ಸ್ಥಾನ ವಂಚಿತ ಶಾಸಕ ಆರ್ ಬಿ ತಿಮ್ಮಾಪೂರಬುದ್ಧ, ಬಸವ, ಅಂಬೇಡ್ಕರ್, ದಲಿತ ಸಮುದಾಯ ನಿಂದಿಸಿದ್ದ ವ್ಯಕ್ತಿ ಅರೆಸ್ಟ್ 20ರ ಊಟದಿಂದ ಆರಂಭವಾದ ಕಿಚನ್ : ಇಂದು ₹2.5 ಕೋಟಿ ವಹಿವಾಟಿನ ಅಮ್ಮಾ ಕಿಚನ್ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಹಂಪನಗೌಡ ಬಾದರ್ಲಿ!ಇದು ವಿಶೇಷ ಗಣೇಶ್: ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಗಣೇಶೋತ್ಸವಕ್ಕೆ ದಾಖಲೆಯ 703 ಕೋಟಿ ವಿಮೆ ಸಿಎ ಓದು ಅರ್ಧಕ್ಕೆ ಬಿಟ್ಟು ಬೆಣ್ಣೆ ದೋಸೆ ಮಾರಾಟಕ್ಕಿಳಿದ ಯುವಕ: ಈಗ ತಿಂಗಳಿಗೆ 12 ಲಕ್ಷ ರೂ. ಆದಾಯ