ಲAಡನ್: ಭಾರತ ಹಾಕಿ ತಂಡವು ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದ ಎಫ್‌ಐಎಚ್ ಫ್ರೋ ಲೀಗ್ ಹಾಕಿ ಪಂದ್ಯಾವಳಿಯ ಪಂದ್ಯದಲ್ಲಿ ೪-೩ ಗೋಲುಗಳ ರೋಚಕ ಹಣಾಹಣಿಯಲ್ಲಿ ಜಯ ಸಾಧಿಸಿದೆ.
ಇಲ್ಲಿನ ಲೀ ವ್ಯಾಲಿ ಹಾಕಿ ಕ್ರೀಡಾಂಗಣ ಹಾಗೂ ಟೆನಿಸ್ ಸೆಂಟರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಕಡೆ ಘಳಿಗೆಯ ಗೋಲುಗಳ ನಡುವೆಯೂ ೪-೩ ಗೋಲುಗಳಿಂದ ಗೆಲ್ಲಲು ಯಶಸ್ವಿಯಾಯಿತು.
ಭಾರತದ ಪರವಾಗಿ ಅಭೀಷೇಕ್ ೨೨ ನೇ ನಿಮಿಷ, ನೀಲಕಂಠ ಶರ್ಮಾ ೨೪, ಸುಖಜೀತ್ ಸಿಂಗ್ ೪೦ ನೇ ನಿಮಿಷ ಹಾಗೂ ರಾಜೇಂದ್ರ ಸಿಂಗ್ ಪಂದ್ಯದ ೫೨ ನೇ ನಿಮಿಷದಲ್ಲಿ ಗೋಲು ಗಳಿಸಿದರು.


