LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನೌಕರಿ ಸಂಘ ಚುನಾವಣೆಯಲ್ಲಿ ಅನ್ಯಾಯ ಹೇಳೋರಿಲ್ಲ....! ಕೇಳೋರಿಲ್ಲ...!

Advertisement
ಕಂಪ್ಲಿ :ಎಸ್.ಎನ್ ಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಇಂದು ನೌಕರಿ ಸಂಘದ ವತಿಯಿಂದ ನೌಕರಿಸಿದ ಚುನಾವಣೆ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎನ್‌ಪಿಎಸ್ ನಾಗನಗೌಡ ಮಾತಾಡಿ ಯಾವುದೇ ದಾಖಲೆಯಿಲ್ಲದೆ ಚುನಾವಣೆ ಪಟ್ಟಿಯಿಂದ ಅಭ್ಯರ್ಥಿಗಳ ಹೆಸರನ್ನು ತೆಗೆದ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ನೌಕರಿ ಸಂಘದ ಪದಾಧಿಕಾರಿಗಳು ನೌಕರಿ ಸಂಘದ ಚುನಾವಣೆಯಲ್ಲಿ ಕಂಪ್ಲಿಯ ತಾಲೂಕಿನಲ್ಲಿ ಮತದಾನ ಪಟ್ಟಿ ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದು ಚುನಾವಣಾ ಪಟ್ಟಿಯಲ್ಲಿ ಪ್ರಮುಖ ವ್ಯಕ್ತಿಗಳನ್ನು ಹೆಸರು ತೆಗೆದುಹಾಕಿ ತಮ್ಮ ರಾಜಕೀಯ ಹಾಗೂ ವೈಯಕ್ತಿಕ ವಿಚಾರಕ್ಕಾಗಿ ಶಿಕ್ಷಕರ ಮಧ್ಯೆ ಪೈಪೋಟಿ ಏರ್ಪಡಿಸಿ ಧೋರಣೆ ಮಾಡಿದ ಅಧಿಕಾರಗಳ ವಿರುದ್ಧ ಧರಣಿ ಮಾಡುವುದಾಗಿ ನೌಕರಿಸಂಘದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನೌಕರಿ ಸಂಘದ ಚುನಾವಣೆ ನಾಮಿನೇಷನ್ ಹಾಗೂ ಎಲೆಕ್ಷನ್ ಇದ್ದು ಚುನಾವಣೆ ಆಫೀಸ್ ಓಪನ್ ಇಲ್ಲ ಯಾಕೆ ನಾಗನಗೌಡ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ನೌಕರಿ ಸಂಘದ ಚುನಾವಣೆ ಹಾಗೂ ಪದಾಧಿಕಾರಿಗಳ ನೇಮಕಾತಿ ಹಾಗೂ ಚುನಾವಣೆಗೆ ಅರ್ಹತೆ ಇರುವ ವ್ಯಕ್ತಿಗಳನ್ನು ಚುನಾವಣೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ತೆಗೆದುಹಾಕಿ ತಮ್ಮ ಒಳಸಂಚನ್ನ ಮಾಡಿರುವ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ತಕ್ಕ ಶಿಸ್ತಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲದಿರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ.

ಪುರುಷ ಮತ್ತು ಮಹಿಳೆಯರಿಗೂ ಸಹ ಸಮಾನ ಹಕ್ಕಿದೆ ಎಂಬುದನ್ನು ಮರೆತ ಅಧಿಕಾರಿಗಳು ನೌಕರಿ ಸಂಘದ ಚುನಾವಣೆಯನ್ನು ಯಾವ ಕಾರಣಕ್ಕೆ ನಿಲ್ಲಿಸಿದ್ದೀರಿ ಆದೇಶ ಇದ್ದರೆ ಕೊಡಿ ಸ್ವಾಮಿ

ಚುನಾವಣೆ ಪಟ್ಟಿಯಿಂದ ಪದಾಧಿಕಾರಿಗಳ ಹೆಸರನ್ನು ಕಿತ್ತಿ ಹಾಕಲು ಅಧಿಕಾರ ನೀಡಿದವರು ಯಾರು....? ಸಂವಿಧಾನವು ನಿಮ್ಮಪ್ಪನ ಸ್ವತ್ತೆ..!

ಶಿಕ್ಷಕರಿಗೆ ಇಂಥ ಅನ್ಯಾಯ ಆದಾಗ ಇನ್ನು ಸಾಮಾನ್ಯ ಪ್ರಜೆಗಳಿಗೆ ಎಷ್ಟು ಅನ್ಯಾಯ ಆಗಬಹುದು, ಸಮಾಜವನ್ನು ತಿದ್ದುವಂತ ಶಿಕ್ಷಕರ ಚುನಾವಣೆಯಲ್ಲಿ ಈ ರೀತಿ ಗೋಲುಮಾಲು ಮಾಡುವ ಅಧಿಕಾರಿಗಳು ರಾಜಕಾರಣಿಗಳು ಪ್ರಜೆಗಳಿಗೆ ಶಾಸಕಾಂಗ,ಕಾರ್ಯಂಗ ನ್ಯಾಯಾಂಗ ಅಡಿಯಲ್ಲಿ ಯಾವ ರೀತಿ ಪ್ರಜಾಪ್ರಭುತ್ವವನ್ನು ನಡೆಸುತ್ತಾರೆ ಎನ್ನುವುದೇ ಆಶ್ಚರ್ಯ ಸಂಗತಿ ಎಂದರು

ಬಳ್ಳಾರಿ ಜಿಲ್ಲಾ ಹಾಗೂ ಕಂಪ್ಲಿ ತಾಲೂಕಿನಲ್ಲಿ ನೌಕರಿ ಸಂಘದ ಚುನಾವಣೆ ಹಾಗೂ ಪದಾಧಿಕಾರಿಗಳ ಚುನಾವಣೆ ಪಟ್ಟಿಯನ್ನು ತೆಗೆದುಹಾಕಿ ತಾರತಮ್ಯ ಮಾಡಿರುವ ವಿರುದ್ಧ ತಕ್ಕ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ

ಸಮಾಜವನ್ನು ತಿದ್ದುವ ಭಾವಿ ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕರಿಗೆ ಈ ರೀತಿ ಅನ್ಯಾಯವಾದರೆ ಡಾ. ಬಿಆರ್ ಅಂಬೇಡ್ಕರ್ ಅವರ ಕೊಟ್ಟಿರುವಂತಹ ಸಂವಿಧಾನವನ್ನ ಗಾಳಿಗೆ ತೂರಿ ತಮಗೆ ಇಚ್ಛೆ ಬಂದಂತೆ ಮತದಾನ ಪಟ್ಟಿಯಿಂದ ಕಿತ್ತಿಹಾಕಿ ತಮಗೆ ಬೇಕಾದ ವ್ಯಕ್ತಿಗಳಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ತಕ್ಕ ಕಾನೂನು ಕ್ರಮ ಜರುಗಿಸಬೇಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ