Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ :ಅರಿವು ಮೂಡಿಸಿದ ಕರವೇ ಕಾರ್ಯಕರ್ತರು

Advertisement
ನಿಪ್ಪಾಣಿ: ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ಫಲಕವೇಕೆ ಮರಾಠಿ? ಎನ್ನುತ್ತಿಲ್ಲ ನಮ್ಮ ಉದ್ಯೋಗ ವ್ಯಾಪಾರ ನಡೀಬೇಕು ಅದರ ಜೊತೆಗೆ ನಾವು ಕರ್ನಾಟಕದಲ್ಲಿದ್ದೇವೆ ಎಂಬುದನ್ನು ಮರೆಯದಿರಿ ಎಂದು ಗುಲಾಬಿ ಹೂ ನೀಡಿ ಧನ್ಯವಾದಗಳನ್ನು ತಿಳಿಸಿದ ಕನ್ನಡ ಸೇವಕರು ಶೇ 100 ರಷ್ಟು ಕನ್ನಡ ಅಳವಡಿಕೆಯತ್ತ ಖಡಕಲಾಟ ಗ್ರಾಮದಲ್ಲಿ ಅಭಿಯಾನ ಪ್ರಾರಂಭಿಸಿದರು.



ರವಿವಾರ ಖಡಕಲಾಟ ಗ್ರಾಮದಲ್ಲಿ ಯುವ ಕನ್ನಡ ಜಾಗೃತಿ ಬಳಗ,ಕನಾ೯ಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗ್ರಾಮದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ಕನ್ನಡದ ಅರಿವು ಮೂಡಿಸಿ ನಾಮಫಲಕದಲ್ಲಿ ಕಡ್ಡಾಯ ಕನ್ನಡ ಅಳವಡಿಸಿದ ಮಾಲೀಕರಿಗೆ ಗುಲಾಬಿ ನೀಡಿ ಧನ್ಯವಾದಗಳನ್ನು ತಿಳಿಸಿ ಇನ್ನು ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೂ ಗುಲಾಬಿ ನೀಡಿ ಮುಂದಿನ ವಾರದೊಳಗೆ ಕನ್ನಡ ಕಡ್ಡಾಯ ಅಳವಡಿಸಲು ಮನವಿ ಮಾಡಿದ ಕನ್ನಡ ಕರಸೇವಕರು,ಕನಾ೯ಟಕರಲ್ಲಿ ಕನ್ನಡವೇ ಸಾವ೯ಭೌಮ ಇಲ್ಲಿ ಆಡಳಿತ ನಾಮಫಲಕ ದಾಖಲೆಗಳು ಕನ್ನಡದಲ್ಲಿ ಇರಲೆಬೇಕು ಎಂಬ ಸಂದೇಶ ನೀಡಲಾಯಿತು ತದನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಶೇ 90 ರಷ್ಟು ಕನ್ನಡ ಅಳವಡಿಸಿದ್ದಕ್ಕೆ ಅಧಿಕಾರಿಗಳಿಗೆ ಪುಷ್ಪ ನೀಡಿ ಗೌರವಿಸಿ ಶೇ 10 ಶಿಘ್ರ ಅಳವಡಿಸಲು ಮನವಿ ಮಾಡಲಾಯಿತು.



 

ತದನಂತರ ಶಾಸಕರ ಮಾದರಿ ಸರಕಾರಿ ಕನ್ನಡ ಶಾಲೆಗೆ ಭೇಟಿ ನೀಡಿ ಕನ್ನಡ ಶಾಲೆಯ ಏಳಿಗೆಗೆ ಧನ್ಯವಾದಗಳನ್ನು ಹೇಳಿ ಶಾಲಾ ಪರಿಸರದಲ್ಲಿ ಹಾಗೂ ಕಮಾನುಗಳಲ್ಲಿ ಕಡ್ಡಾಯ ಕನ್ನಡ ಅಳವಡಿಸಲು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕರವೇ ಚಿಕ್ಕೋಡಿ ತಾಲೂಕಿನ ಅಧ್ಯಕ್ಷ  ಸಂಜು ಬಡಿಗೇರ, ಮಾಹಿತಿ ಹಕ್ಕು ಕಾಯ೯ಕತ೯ ಚಂದ್ರಕಾಂತ ಹುಕ್ಕೇರಿ, ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ತು ಕಾಯ೯ದಶಿ೯,ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ ಮಿಥುನ ಅಂಕಲಿ,ಯುವ ಕನ್ನಡ ಜಾಗೃತಿ ಬಳಗದ ಅಧ್ಯಕ್ಷ  ಶಿವರಾಜ ಕೂಟ, ಖಡಕಲಾಟ ಕರವೇ ಅಧ್ಯಕ್ಷ ಶಂಕರ ಅವಡಖಾನ,ಶಮನೆವಾಡಿ ಕರವೇ ಅಧ್ಯಕ್ಷ  ಮಂಜು ಭಾನುಸೆ,ಯುವ ಕನ್ನಡ ಬಳಗದ ಉಪಾಧ್ಯಕ್ಷ  ಬಾಹುಬಲಿ ಮಗದುಮ್ಮ,ಕರವೇ ಉಪಾಧ್ಯಕ್ಷ ಕು ಪ್ರಶಾಂತ ಪರಿಟ,ಕಾಯ೯ದಶಿ೯  ಆಕಾಶ ವಿಜಯನಗರೆ, ಖಜಾಂಚಿ ಮಲ್ಲಪ್ಪಾ ಪೂಜಾರಿ, ಕನ್ನಡ ಸಂಘಟಕರಾದ ವಿಠ್ಠಲ ಅವಡಖಾನ, ಸೂರಜ ಸಂಕಾಜೆ,  ರಾಜು ಸಂಕಾಜೆ, ಮಂಜು ರಾನಗೆ,ಶಿವು ಮಡಿವಾಳ,ಚೇತನ ಧಾತ್ರೆ ಸಹಿತ ಖಡಕಲಾಟ,ಚಿಕ್ಕೋಡಿ,ಶಿರಗಾಂವ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ