LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜುಲೈ 21 ರಂದು ತುರುವೇಕೆರೆಯಲ್ಲಿ ಕುರುಕ್ಷೇತ್ರ ನಾಟಕ

Advertisement
ತುರುವೇಕೆರೆ: ಪಟ್ಟಣದ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಹಿರಿಯ ರಂಗಭೂಮಿ ಕಲಾವಿದ ದೇವೀಹಳ್ಳಿ ಮಂಜಣ್ಣನವರ ಜನ್ಮದಿನದ ಅಂಗವಾಗಿ ಜುಲೈ 21 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ವಹಿಸಲಿದ್ದು, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್ (ರಾಜು), ಪಪಂ ಸದಸ್ಯ ಚಿದಾನಂದ್ ಉದ್ಘಾಟಿಸಲಿದ್ದಾರೆ. ಕ್ಯಾಮಸಂದ್ರ ಚಂದ್ರಮೂರ್ತಿ ಸಂಗೀತ ನಿರ್ದೇಶಿಸಲಿದ್ದು, ಅತಿಥಿಗಳಾಗಿ ಪಪಂ‌ ಅಧ್ಯಕ್ಷೆ ಸ್ವಪ್ನ‌ನಟೇಶ್, ಟೌನ್ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ರಾಮೇಗೌಡ, ಪಪಂ ಸದಸ್ಯ ಸುರೇಶ್, ಟಿ.ಪಿ.ಮಹೇಶ್, ವಕೀಲ ಕೆ.ನಾಗೇಶ್, ನೆಮ್ಮದಿ ಗ್ರಾಮದ ಸಿ‌.ಎಸ್.ಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್, ಪಿಎಸ್ಐ ಕೃಷ್ಣಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬೆಸ್ಕಾ ಎಇಇ ರಾಜಶೇಖರ್, ಹಿರಿಯ ರಂಗ ಕಲಾವಿದ ಸತೀಶ್, ಕಲ್ಕೆರೆ ಶಂಕರೇಗೌಡ, ಕಲ್ಕೆರೆ ಮಂಜುನಾಥ್, ಚಿಕ್ಕೀರಪ್ಪ, ಶಿವಯ್ಯ ಮುಂತಾದವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ದೇವಿಹಳ್ಳಿ ಮಂಜಣ್ಣನವರನ್ನು ಅಭಿನಂದಿಸಲಾಗುವುದು.

ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಟಿ.ಎನ್.ರಾಘವೇಂದ್ರ, ದೃತರಾಷ್ಟ್ರನಾಗಿ ಸಂತೋಷ್, ದುರ್ಯೋದನನಾಗಿ ಕುಮಾರಸ್ವಾಮಿ, ದುಶ್ಯಾಸನನಾಗಿ ಗೋವಿಂದರಾಜು, ಕರ್ಣನಾಗಿ ಗಿರೀಶ್, ಧರ್ಮನಾಗಿ ಶಿವಲಿಂಗಪ್ಪ, ಭೀಮನಾಗಿ ಕುಮಾರ್, ಅರ್ಜುನನಾಗಿ ಸಂತೋಷ್, ದ್ರೌಪದಿಯಾಗಿ ನಾಗಮಣಿ, ರುಕ್ಮಿಣಿಯಾಗಿ ಚೈತ್ರ, ಗಾಂಧಾರಿ, ಕುಂತಿಯಾಗಿ ರಾಜೇಶ್ವರಿ ಅಭಿನಯಿಸಲಿದ್ದಾರೆ‌. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ಪ್ರದರ್ಶನ ಯಶಸ್ವಿಗೊಳಿಸಲು ಮಂಡಳಿ ಕೋರಿದೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗರೂ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬಾಂಗ್ಲಾಶಿಸ್ತು ನಿಷ್ಠೆಯಿಂದ ವಿದ್ಯಾರ್ಥಿಗಳು ಆದರ್ಶ ನಾಯಕರಾಗಿ : ಮಹಾಂತೇಶ್ ಓಲೇಕಾರ  ಮುಂದಿನ 6 ತಿಂಗಳಲ್ಲಿ ಖಾಲಿರುವ ಎಲ್ಲಾ ಹುದ್ದೆಗಳ ಭರ್ತಿ : ಡಿ. ಕೆ ಶಿವಕುಮಾರ್ ಘೋಷಣೆ ಅರಣ್ಯ ಇಲಾಖೆ ಗುಂಡೇಟಿಗೆ ಮೂವರು ಕಾಡಿಗಳ್ಳರು ಬಲಿRSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ : ಪ್ರಿಯಾಂಕ್ ಖರ್ಗೆಗೆ ಬಿ. ಎಲ್ ಸಂತೋಷ್ ತಿರುಗೇಟು ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ವಾಪಸ್ ಪಡೆಯುವುದಿಲ್ಲ : ಯು.ಟಿ. ಖಾದರ್ ಸ್ಪಷ್ಟನೆಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್ ಬೂಮ್ರಾ- ಸಾಯಿ ಸುದರ್ಶನ ಸಂಪರ್ಕದಲ್ಲಿದ್ದೇವೆ: ಶುಭಮಾನ್ ಗಿಲ್ಯುವ ಸಮುದಾಯದ ದಾರಿ ತಪ್ಪಿಸಲು ನನ್ನ ಪದ ದುರ್ಬಳಕೆ : ಸಿಜೆಐ ಸೂರ್ಯಕಾಂತ್‌ ಕಳವಳ ಸಾರ್ವಜನಿಕ ಸ್ಥಳಗಳ ಬಳಕೆ ನಿಯಮ RSS ವಿರುದ್ಧವಲ್ಲ : ಪ್ರಿಯಾಂಕ್ ಖರ್ಗೆ ತಿರುಗೇಟು