ಸಿಂಧನೂರು :ಕರ್ನಾಟಕ ಕೃಷಿಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಅಪ್ಪಣ್ಣ ಕಾಂಬ್ಳೆ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಸಿ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಅವರು ಮಾತನಾಡಿ ತಾಲ್ಲೂಕಿನಲ್ಲಿ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಬಡ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿದ್ದರೂ ಇದುವರೆಗೂ ಪಟ್ಟಾ ಸಿಕ್ಕಿರುವುದಿಲ್ಲ.ಈ ಬಾರಿ ಒಂದೇ ಬೆಳೆ ಆಗಿದ್ದರಿಂದ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಜನರು ಬೆಂಗಳೂರು- ಮಂಗಳೂರು ಸೇರಿದಂತೆ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ, ತಾಲೂಕಿನ ಹಲವು ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಕೂಲಿಕಾರರಿಗೆ ಮೂಲ ಸೌಲಭ್ಯಗಳನ್ನು ಕೊಡದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಹಾಗೂ ತಾಲ್ಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದ ಕಾಲುವೆ ಪಕ್ಕದಲ್ಲಿ ಕಳೆದ ೬೦ ವರ್ಷಗಳಿಂದ ೮೦ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ ಇಲ್ಲಿಯವರೆಗೂ ಅವರಿಗೆ ಸೂರು ಕಲ್ಪಿಸಲು ಆಗಿಲ್ಲ ಹೀಗೆ ದುಡಿಯುವ ವರ್ಗ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದು, ಬೇಡಿಕೆಗಳನ್ನು ಈಡೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು ಮನವಿ ಪತ್ರ ನೀಡಿದರು .
ಈ ವೇಳೆ ತಾಲೂಕ ಅಧ್ಯಕ್ಷ ಶಂಕ್ರಪ್ಪ ಕೆಂಗಲ್. ತಾಲೂಕ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ. ಉಪಾಧ್ಯಕ್ಷರಾದ ಶಿವನಗೌಡ ಮಂಗದಗುಡ್ಡ. ಮರಿಯಮ್ಮ ವಿರುಪಾಪುರ. ಸಹ ಕಾರ್ಯದರ್ಶಿ ಹುಸೇನಪ್ಪ ದಡೇಸೂಗುರು. ರೇಣುಕಮ್ಮ ಕೆಂಗಲ್ ಸೇರಿದಂತೆ ಲಚುವಮ್ಮ ಕೆಂಗಲ್. ಜೋಟಮಾ ವೀರಭದ್ರಗೌಡ ಮಲ್ಲದಗುಡ್ಡ ಮಾನಮ್ಮ ಹರಳಹಳ್ಳಿ ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ


