ಸಿರುಗುಪ್ಪ : ಗೈರು ಪಟ್ಟದಾರರ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವ ಆದೇಶ ವು ಸಂಘದ ಹೋರಾಟ ಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರು ವಿ.ಎಸ್ ಶಿವಶಂಕರ್ ಅವರು ಹರ್ಷ ವ್ಯಕ್ತಪಡಿಸಿದರು.
ಸಿರುಗುಪ್ಪ ಸಂಘ ತಾಲೂಕು ಸಮಿತಿಯ ಗೈರು ಪಟ್ಟದಾರರ ಜಮೀನುಗಳನ್ನು ಸರ್ಕಾರ ಬಸಪಡಿಸಿಕೊಂಡ ಸಾಗುವಳಿ ದಾರರಿಗೆ ಹಕ್ಕು ಪತ್ರ ನೀಡಬೇಕೆಂದು ಸುಮಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ.
ಸುದೀರ್ಘ ಹೋರಾಟದ ಫಲವಾಗಿ ಇದೀಗ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಸಿರುಗುಪ್ಪ ತಾಲೂಕಿನ 5 ಹಳ್ಳಿಗಳಲ್ಲಿ ನಕಲಿ ಭೂ ಮಾಲೀಕರ ರಿಜಿಸ್ಟರ್ ಪತ್ರಗಳನ್ನು ರದ್ದುಪಡಿಸಿ ಪಾಣಿ ಕಾಲಂ 9 ಮತ್ತು 12(2) ರಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಿಸಲು ತಾಸಿಲ್ದಾರರಿಗೆ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತನು ಜಮೀನನಲ್ಲಿ ಸಂಭ್ರಮಾಚರಣೆ ನಡೆಸಿದರು.
ಇದೆ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿ. ಮಾರುತಿ. ಸದಸ್ಯರಾದ ಹೆಚ್ .ಕಾಳಪ್ಪ. ಎಂ. ದುರ್ಗಪ್ಪ. ಜಿ.ತಿರುಮಲ. ಯು.ಹನುಮೇಶ್. ಗಡಿಗಿ ವೀರೇಶ್. ಗಾಳಪ್ಪ ಗಾಳಪ್ಪ. ಕಾಕೇರು ಬಸಪ್ಪ. ನಾಡಿಗರ ವೀರೇಶ. ಕಾಕೇರು ಹೋಬಳೇಶ್. ಜಿ ರಾಮ. ಇನ್ನಿತರ ಇದ್ದರು.
ವರದಿ : ಶ್ರೀನಿವಾಸ ನಾಯ್ಕ

