ರಾಯಚೂರು : ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಕಟ್ಟಡವೊಂದರ ಮುಂಭಾಗದ ಮೊದಲ ಅಂತಸ್ತಿನ ಚಾವಣಿ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಯಾದಿಗೇರಾದೊಡ್ಡಿ ನಿವಾಸಿ ನಾಗರಾಜ ಚಿದಾನಂದಪ್ಪ (20) ಮತ್ತು ಸಮುದ್ರ ಗ್ರಾಮದ ರವಿ ಕುಮಾರ ಯಲ್ಲಪ್ಪ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋತಿಗುಡ್ಡ ಗ್ರಾಮದ ಯುವಕ ಅರ್ಜುನ ತೀವ್ರ ಗಾಯಗೊಂಡಿದ್ದು ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ದೇವದುರ್ಗ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕನ್ನಡ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಜವಗಳನ್ನು ಹೊರ ತೆಗೆದಿದ್ದಾರೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


