LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್. ವೈ. ಗೋಪಾಲಕೃಷ್ಣ ಚಾಲನೆ

Advertisement
ಮೊಳಕಾಲ್ಮುರು:ತಾಲೂಕಿನ ವಿವಿಧ ಕಡೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಗುರುವಾರ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿದರು.

ತಾಲೂಕಿನ ಮರ್ಲಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 2.50 ಕೋಟಿ ವೆಚ್ಚದ ಮಲ್ಪೆ ಮೊಳಕಾಲ್ಮುರು ರಾಜ್ಯ ಹೆದ್ದಾರಿ ಅಭಿವೃದ್ಧಿ, ವಡೇರಹಳ್ಳಿ ಬಳಿಯಲ್ಲಿ 2.50 ಕೋಟಿ ವೆಚ್ಚದ ಹಂಪಿ ಕಮಲಾಪುರ ಹೆದ್ದಾರಿ ಅಭಿವೃದ್ಧಿ ಶಂಕು ಸ್ಥಾಪನೆ ನೆರವೇರಿಸಿದರು.
ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಧ್ಯಾಹ್ನ 1:30ಕ್ಕೆ ವಿಕಲ ಚೇತನರಿಗೆ ಯಂತ್ರ ಚಾಲಿತ ದ್ವಿ ಚಕ್ರವಾಹನ ವಿತರಿಸಿದರು.


ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ಬ್ಯಾಟರಿ ಚಾಲಿತ ವೀಲ್ ಚೇರ್,ಮೂವರಿಗೆ ಟಾಕಿಂಗ್ ಲ್ಯಾಪ್ ಟ್ಯಾಪ್,ಮೂರು ಹೊಲಿಗೆ ಯಂತ್ರ ಸೇರಿದಂತೆ ಹತ್ತು ಫಲಾನುಭವಿಗಳಿಗೆ ವಿವಿಧ ಸಲಕರಣೆ ವಿತರಿಸಿದರು.


ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 167 ಫಲಾನುಭವಿಗಳಿಗೆ ಪೂರ್ವ ಕಲಿಕೆಯ ಮಾನ್ಯತೆ ಕಿಟ್,ಕಂದಾಯ ಇಲಾಖೆಯ ಹದಿನೈದು ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಲಾಯಿತು.ಈ ವೇಳೆ ತಹಶೀಲ್ದಾರ್ ಜಗದೀಶ್, ಜಿಲ್ಲಾ ಅಂಗವಿಕಲ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಅಧಿಕಾರಿ ವೈಶಾಲಿ,ಕಾರ್ಮಿಕ ನಿರೀಕ್ಷಕಿ ಕುಸುಮ,ಸಿಬ್ಬಂದಿ ನಗೀನಾ,ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮಿ ನಾರಾಯಣ, ಪಟ್ಟಣ ಪಂಚಾಯಿತಿ ಸದಸ್ಯ ಖಾದ‌ರ್, ಪಿ ಗೋಪಾಲ್ ಮರ್ಲ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ,ಸದಸ್ಯರಾದ ಬಂಗಿ ಸೂರಯ್ಯ,ಗಂಗರೆಡ್ಡಿ.ಗಂಗರಾಜ,ಮುಖಂಡರಾದ ತಿಪ್ಪೇಸ್ವಾಮಿ,ದಾನ ಸೂರನಾಯಕ,ರೇಷ್ಮೆ ವೀರೇಶ್,
ಎನ್. ನಾಗರಾಜ,ಪಿಡಿಓ ಮಲ್ಲಿಕ್ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ