ನಾಯಕತ್ವ ಬದಲಾವಣೆ ಕರ್ನಾಟಕಕ್ಕೆ ಹೊಸದಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಳು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಡೆಯುತ್ತಲೇ ಬಂದಿವೆ.
ಮುAಬರುವ ವಿಧಾನ ಸಭೆ ಚುನಾವಣೆ ಇನ್ನು ೨ ವರ್ಷಗಳು ಉಳಿದಿರುವಾಗಲೇ ಕಾಂಗ್ರೆಸ್ ಹೈ ಕಮಾಂಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿರ್ಧಾರ ಕೈಗೊಂಡಿದೆ.
ಕರ್ನಾಟಕದಲ್ಲಿ ಕೇವಲ ಮೂರು ನಾಯಕರು ಮಾತ್ರ ಐದು ವರ್ಷಗಳ ಪೂರ್ಣಾವಧಿ ಮುಗಿಸಿದ್ದಾರೆ. ದೇವರಾಜ್ ಅರಸು, ಎಸ್ ನಿಜಲಿಂಗಪ್ಪ ಹಾಗೂ ಸಿದ್ದರಾಮಯ್ಯನವರು ಮಾತ್ರ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸಿದ್ದಾರೆ.
ಸಿದ್ದರಾಮಯ್ಯನವರು ೨೦೧೩ ರಿಂದ ೧೮ ರವರೆಗೆ ಪೂರ್ಣಾವಧಿ ಅಧಿಕಾರ ನಡೆಸಿದ್ದು, ಇತ್ತೀಚಿನ ಉದಾಹರಣೆ. ಈ ಮೂರು ಅವಧಿ ಬಿಟ್ಟರೆ ಉಳಿದೆಲ್ಲ ಅವಧಿಗಳಲ್ಲಿ ನಾಯಕತ್ವ ಬದಲಾವಣೆ ನಡೆದಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯ ಮೂವರು ಸಿಎಂಗಳನ್ನು ಕಂಡಿತ್ತು. ಈ ಬಾರಿ ಕಾಂಗ್ರೆಸ್ ಹೈಕಮಾಂಡ ಹಲವು ಅನಿವರ‍್ಯತೆಗಳ ನಡುವೆ ನಾಯಕತ್ವ ಬದಲಾವಣೆ ಮಾಡಬೇಕಾಯಿತು.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಮರ್ಥ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆದಿದ್ದರೂ, ಸಿಎಂ ಸಿದ್ದರಾಮಯ್ಯನವರ ವಯಸ್ಸು ಪರಿಗಣನೆಯಲ್ಲಿ ಇಟ್ಟುಕೊಂಡು ನಾಯಕತ್ವ ಅನಿವರ‍್ಯವಾಗಿ ಮುಂದಿನ ಪೀಳಿಗೆಗೆ ಹೋಗಲೇ ಬೇಕಾಗಿದ್ದರಿಂದ ಕಾಂಗ್ರೆಸ್ ಹೈ ಕಮಾಂಡ ಈ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು.
ಇನ್ನೊಂದೆಡೆ ಅಧಿಕಾರ ಹಂಚಿಕೆ ಮಾತುಕತೆ ಹೈ ಕಮಾಂಡ ಮಟ್ಟದಲ್ಲಿ ನಡೆದಿದೆ ಎನ್ನಲಾದ ಸುದ್ದಿಯ ನಡುವೆಯೂ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ ಮುಂದಾಗಬೇಕಾಯಿತು ಎಂಬ ವಿಶ್ಲೇಷಣೆಗಳು ಕೂಡ ನಡೆದಿವೆ. ಒಟ್ಟಿನಲ್ಲಿ ರಾಜ್ಯಕ್ಕೆ ನಾಯಕತ್ವ ಬದಲಾವಣೆ ಹೊಸದಲ್ಲ ಎಂಬ ವಾದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

