Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಯಾ ಯೋಗದ ಉಪನ್ಯಾಸ ಇಂದು

Advertisement
ಧಾರವಾಡ : ಪರಮಹಂಸ ಯೋಗಾನಂದರ ಕ್ರಿಯಾ ಯೋಗದ ಬೋಧನೆಗಳ ಆಧಾರಿತ ಉಪನ್ಯಾಸ ಕಾರ್ಯಕ್ರಮ ದಿ. 25ರಂದು ಸಂಜೆ 6ರಿಂದ 7.15ರ ವರೆಗೆ ನಗರದ ಹೋಟೆಲ್ ಗ್ರ್ಯಾಂಡ್‌ ಮಾಸ್ಟಿವ್‌ನಲ್ಲಿ ನಡೆಯಲಿದೆ ಎಂದು ಯೋಗದ ಸತ್ಸಂಗ ಸೊಸೈಟಿ ಉಪಾಧ್ಯಕ್ಷ ಸ್ವಾಮಿ ಸ್ಮರಣಾನಂದ ಗಿರಿಯವರ ಹೇಳಿದರು.
ನಗರದಲ್ಲಿ ಮಾಹಿತಿ ನೀಡಿದ ಅವರು, ಪರಮಹಂಸ ಯೋಗಾನಂದರ ಉಪದೇಶಗಳು ಹಾಗೂ ವೈಜ್ಞಾನಿಕ ಧ್ಯಾನದ ಆಧ್ಯಾತ್ಮಿಕ ಮಹತ್ವದ ಕುರಿತ ಉಪನ್ಯಾಸದ ನಂತರ, ಆಸಕ್ತರಿಗೆ ಅದೇ ವೈಜ್ಞಾನಿಕ ಧ್ಯಾನದ ಕೆಲವು ಮೂಲಭೂತ ತಂತ್ರಗಳನ್ನು ಬೋಧಿಸಲಾಗುವುದು ಎಂದರು.
1917ರಲ್ಲಿ ಆಧ್ಯಾತ್ಮಿಕ ಮಹಾಗುರು ಪರಮಹಂಸ ಯೋಗಾನಂದರು ಸ್ಥಾಪಿಸಿದ ಸಂಸ್ಥೆ-ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಶೀಘ್ರದಲ್ಲೇ ಯೋಗದಾ ಸತ್ಸಂಗ ಕ್ರಿಯಾ ಯೋಗ ಪಾಠಗಳನ್ನು ಕನ್ನಡದಲ್ಲಿ ಪರಿಚಯಿಸಲಿದೆ. ಇದರಿಂದ ಪ್ರಾಚೀನ ಮತ್ತು ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನ ಉಪದೇಶಗಳು ಮತ್ತು ಯೋಗದ ಸರ್ವಮಾನವೀಯ ತತ್ವಗಳು ಕನ್ನಡಭಾಷಿಕ ಆತ್ಮಸಾಧಕರಿಗೆ ಅವರ ಮಾತೃಭಾಷೆಯಲ್ಲಿ ಲಭ್ಯವಾಗಲಿವೆ ಎಂದರು.
ಈ ಪಾಠಗಳು ಈಗಾಗಲೇ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ಅವುಗಳ ಮೂಲಕ ಸಾವಿರಾರು ಆತ್ಮಸಾಧಕರು ಆಂತರಿಕ ಪರಿವರ್ತನೆ ಅನುಭವಿಸುತ್ತಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಯೋಗದಾ ಸತ್ಸಂಗ ಸೊಸೈಟಿ ಶಾಂತಿ, ಆಂತರಿಕ ಭದ್ರತೆ ಮತ್ತು ಶಾಶ್ವತ ಸಂತೋಷ ಹುಡುಕುವ ಜನರಿಗೆ ಭಾರತದ ಅಮೂಲ್ಯ ಆಧ್ಯಾತ್ಮಿಕ ಜ್ಞಾನ ಹಂಚಿಕೊಂಡಿದೆ ಎಂದರು.
ಪರಮಹಂಸ ಯೋಗಾನಂದರು ಬೋಧಿಸಿದ ಧ್ಯಾನದ ವೈಜ್ಞಾನಿಕ ವಿಧಾನಗಳು ಮತ್ತು ಸಮತೋಲನಯುತ ಜೀವನದ ತತ್ವಗಳ ಮೂಲಕ, ಪ್ರಾಮಾಣಿಕ ಸಾಧಕರು ಕ್ರಮಬದ್ಧವಾಗಿ ಮತ್ತು ಹಂತ ಹಂತವಾಗಿ ಕ್ರಿಯಾ ಯೋಗ ಧ್ಯಾನದ ತಂತ್ರಗಳನ್ನು, ಮನೆ ಮೂಲಕ ಅಧ್ಯಯನದ ಪತ್ರಾಚಾರ ಪಾಠಕ್ರಮವಾಗಿ ಕಲಿಯಬಹುದು ಮತ್ತು ತಮ್ಮ ದೈನಂದಿನ ಕರ್ತವ್ಯಗಳನ್ನು ಮುಂದುವರಿಸಿಕೊಂಡೇ ಈ ಉಪದೇಶಗಳನ್ನು ಅಭ್ಯಾಸ ಮಾಡಬಹುದು ಎಂದು ತಿಳಿಸಿದರು.
ಪರಮಹಂಸ ಯೋಗಾನಂದರ ಉಪದೇಶಗಳು ಮತ್ತು ಕ್ರಿಯಾ ಯೋಗ ಧ್ಯಾನದ ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಮೂಲಕ ಪ್ರತಿಯೊಬ್ಬರೂ ತಮ್ಮೊಳಗಿನ ಅಂತರಂಗದ ಶಾಂತಿ ಹಾಗೂ ಅಂತರ್ನಿಹಿತ ದೈವಿಕ ಸಾನಿಧ್ಯ ಶಕ್ತಿ ಮತ್ತು ಆನಂದವನ್ನು ನೇರವಾಗಿ ಅನುಭವಿಸಬಹುದು ಎಂಬುದನ್ನು ವಿಶೇಷವಾಗಿ ವ್ಯಕ್ತಪಡಿಸುತ್ತೇವೆ ಎಂದರು.
ಸ್ವಾಮಿ ಶ್ರೇಯಾನಂದ ಗಿರಿಯವರ ಮಾತನಾಡಿ,

ಯೋಗದಾ ಸತ್ಸಂಗ ಸೊಸೈಟಿ ದೇಶದಾದ್ಯಂತ ಆನ್‌ಲೈನ್ ಧ್ಯಾನ ಕೇಂದ್ರಗಳು ಹಾಗೂ ಪ್ರತ್ಯಕ್ಷ ಧ್ಯಾನ ಕೇಂದ್ರಗಳನ್ನು ನಡೆಸುತ್ತಿದ್ದು, ಭಕ್ತರು ಸಾಮೂಹಿಕ ಧ್ಯಾನ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ, ಈ ಸಂಸ್ಥೆ ಭಾರತದಲ್ಲಿ ಐದು ಆಶ್ರಮಗಳನ್ನು ಹೊಂದಿದ್ದು, ಅಲ್ಲಿ ಸಾಧಕರು ಧ್ಯಾನ, ಆಧ್ಯಾತ್ಮಿಕ ಸಾಧನೆ ಹಾಗೂ ಸಮತೋಲನಯುತ ಜೀವನಕ್ಕೆ ಸಂಬಂಧಿಸಿದ ಶಿಬಿರಗಳು ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದರು.
ಯೋಗದಾ ಸತ್ಸಂಗ ಪಾಠಗಳ ಕನ್ನಡ ಆವೃತ್ತಿಯ ಪ್ರಕಟಣೆ ಹಾಗೂ ಪರಿಚಯದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ https://yssofindia.org/lessons-programmes ಧಾರವಾಡ: 83103 89328; 96861 50110, ಬೆಂಗಳೂರು: 9448101212; 8296335455 ಸಂಪರ್ಕಿಸಬಹುದು ಎಂದರು.

ವರದಿ: ಸುಧೀರ್ ಕುಲಕರ್ಣಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್