LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿ

Advertisement
ನಿಪ್ಪಾಣಿ : ನಗರದ ಸ್ಥಾಪಿಸಲಾಗಿರುವ ಶ್ರೀ ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರದಂದು ಹನುಮಾನ ದೇವರ ಬೆಳ್ಳಿ ಮೂರ್ತಿಯನ್ನು ನಿಪ್ಪಾಣಿ ನಗರದ ಪ್ರಮುಖ ರಸ್ತೆಗಳಾದ ಶಿವಾಜಿ ಚೌಕ್, ಶ್ರೀಮಂತ ನಿಪ್ಪಾಣಕರ ರಾಜವಾಡಾ , ಕೋಟಿವಾಲೆ ಕಾರ್ನರ್, ಮಹಾತ್ಮಾಗಾಂಧಿ ಚೌಕ್, ತೇಲಿ ಗಲ್ಲಿ, ಭಾಟಗಲ್ಲಿಯ ಮೂಲಕ ಮೆರವಣಿಗೆ ಮೂಲಕ ಬ್ಯಾಂಡ್ ಬ್ಯಾಂಜೋ, ಡೊಳ್ಳು, ಕೋಲು, ಬಾರಿಸುತ್ತಾ ಪಾಲಕಿಯನ್ನು ಮಂದಿರ ಕಡೆ ಮೆರವಣಿಗೆ ಮೂಲಕ ಬಾರಿಸುತ್ತ ಮಂದಿರಕ್ಕೆ ಬಂದು 5 ಸುತ್ತು ಪ್ರದಕ್ಷಣೆ ಹಾಕಲಾಯಿತು. ಮರುದಿನ ಮುಂಜಾನೆ ನಿಪ್ಪಾಣಿ ಸಂಸ್ಥೆಯ ರಾಜೇಸಾಹೇಬ ಶ್ರೀಮಂತ ದಾದಾರಾಜೆ ನಿಪ್ಪಾಣಕರ ಸರ್ಕಾರ ಅವರ ಶುಭ ಹಸ್ತೆಯಿಂದ ವಿಧಿ ವಿಧಾನ ಪ್ರಕಾರ ಅಭಿಷೇಕ್, ಪೂಜೆ ಸಲ್ಲಿಸಿದರು, ನಂತರ ಮಹಾಆರತಿ ಮಾಡಲಾಯಿತು ಮಧ್ಯಾಹ್ನ ವೇಳೆಗೆ ಮಹಾಪ್ರಸಾದ ಆಯೋಜಿಸಲಾಗಿತ್ತು ಈ ಸಂಧರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮ ಶ್ರೀಮಂತ ಯುವರಾಜ ಸಿದ್ಧೋಜಿರಾಜೆ ನಿಪ್ಪಾಣಕರ ಸರ್ಕಾರ ,ದೇವದಾಸ್ ಕಾಗಲಕರ್, ರಾಜು ಜೆಡಿ ,ಸುಭಾಷ್, ಅಭಿಜೀತ್ ದುಮಾಳ, ಪಾಳನೆ ಮಹಾದೇವ, ಸುನೀಲ್ ಪ್ರವೀಣ್ ಮಾಳ್ವೆ ,ಮಹಾದೇವ ಲೋಹಾರ್ , ಸುರೇಶ ಮುಂಡೆ, ಸುಬಾಶ ಭಗತ್ ,ಅಭಿಜಿತ್, ಅಮೋಲ್ ಭೋಸಲೆ,ಕಿರಣ್ ಪಾಟೀಲ್ ,ಮಹಾದೇವ ಭೋಯಿ, ಬಾಳು ಪವಾರ್, ಧೈರ್ಯಶೀಲ ಭಗತ್ ಸೇರಿದಂತೆ ಮಂಡಳಿ ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು