LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಒಳ ಮೀಸಲಾತಿ ಜಾರಿಗೆಗೋಳಿಸಬೇಕೆಂದು ಮಾದರ್ ಮಹಾಸಭಾ ಸಮಿತಿ ಪ್ರತಿಭಟನೆ

Advertisement
ಪಾವಗಡ :ಪಟ್ಟಣದಲ್ಲಿ ನ್ಯಾಯಬದ್ಧವಾದ ಹಾಗೂ ಸಂವಿಧಾನಾತ್ಮಕವಾದ ಒಳಮೀಸಲಾತಿ ಜಾರಿಗೊಳಿಸುವಂತೆ ತಾಲೂಕು ಮಾದರ್ ಮಹಾ ಸಭಾ ಸಂಘಟನೆ ವತಿಯಿಂದ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ 11 ಗಂಟೆಗೆ ಗುರುಭವನದ ಬಳಿ ಸಾವಿರಾರು ಸಂಖ್ಯೆಯ ಮಾದರ ಸಮುದಾಯದ ಮುಖಂಡರು ಘೋಷಣೆ ಮೂಲಕ ಜಾಥಾ ತೆರಳಿ ಪಟ್ಟಣದ ಸರ್ಕಲ್ ಹತ್ತಿರ ರಸ್ತೆ ಮಾರ್ಗ ಮತ್ತು ತಾಲೂಕು ಕಚೇರಿ ಬರುವ ಬಳ್ಳಾರಿ ರಸ್ತೆ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಅಲ್ಲಿನ ಮಾದಿಗ ಸಮುದಾಯದ ಮುಖಂಡರುಗಳು ಒಳ ಮೀಸಲಾತಿ ವಿರೋಧಿಗಳಾಗಿರತಕ್ಕಂತವರು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರಾಗಳರಾದ ಮಹದೇವಪ್ಪ. ಪರಮೇಶ್ವರ. ಪ್ರಿಯಾಂಕ ಖರ್ಗೆ. ಹಾಗೂ ಪಾವಗಡ ಶಾಸಕ ಹೆಚ್ ವಿ ವೆಂಕಟೇಶ್ ಇವರುಗಳ ಭಾವಚಿತ್ರಗಳಿಗೆ ಬೆಂಕಿಯನ್ನು ಹಚ್ಚಿದರು.ನಂತರ ಬಳಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.


ರಾಜ್ಯ ಸರ್ಕಾರವು ಸುಮಾರು 56,432 ಬಿಲ್ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸರಿಯಷ್ಟೆ. ಆದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಬಡ್ತಿ ಮೀಸಲಾತಿಯನ್ನು ಸರ್ಕಾರಿ ನೌಕರರಿಗೂ ಅನ್ವಯಿಸಿ ಅನುಷ್ಠಾನಗೊಳಿಸಬೇಕು. ಭೂ ಒಡೆತನ, ಗಂಗಾ ಕಲ್ಯಾಣ, ಅಂಬೇಡ್ಕರ್ ವಸತಿಯ ಸಹಾಯಧನ ನೀಡುವ ಸಾಲ ಸೌಲಭ್ಯ ಯೋಜನೆಗಳು, ಶೈಕ್ಷಣಿಕ ಅಭಿವೃದ್ಧಿ ಇತರೆ ಹಲವಾರು ಯೋಜನೆಗಳನ್ನು ಮುಂದುವರೆಸಬೇಕು. ಬೇಕೆಂದು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಯಲ್ಲಿ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ. ಮಾತನಾಡಿ ರಾಜ್ಯ ಸರ್ಕಾರ ಇಡೀ ಕರ್ನಾಟಕದಲ್ಲಿ ನಮ್ಮ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡ್ತಾ ಇದೆ ಮಾದಿಗ ಸಮುದಾಯಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲಿ ನಮಗೆ ಸಿದ್ದರಾಮಯ್ಯ ಸರ್ಕಾರ ನಮಗೆ ಅನ್ಯಾಯ ಮಾಡಿ ಮೋಸ ಮಾಡ್ತಾ ಇದೆ ಮೂವತ್ತು ವರ್ಷಗಳ ಹೋರಾಟಗಳನ್ನು ಮಾಡಿಕೊಂಡು ಒಳ ಮೀಸಲಾತಿ ಜಾರಿಗೆ ಆಗಬೇಕೆಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿಗೆ ಮಾಡದಿದ್ದರೆ ನಮ್ಮ ಮಾದಿಗ ಸಮುದಾಯ ಎಚ್ಚೆತ್ತುಕೊಂಡಿದೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ವಿರುದ್ಧ ಬೀದಿಗಳಿಗೆ ಇಳಿದು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.



ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು ವೆಟರಿನರಿ ಉಗ್ರಪ್ಪ, ಕನ್ನಮೇಡಿ ಎಸ್. ಹನುಮಂತರಾಯಪ್ಪ. ಕೋರ್ಟ್ ನರಸಪ್ಪ. ನೆರಳುಕುಂಟೆ ಜಯರಾಮಪ್ಪ. ನಿವೃತ್ತ ಎಂಜಿನಿಯರ್ ಪಿ.ಎ.ಚಂದ್ರಕಾಂತ್ ರಾಜ್
ಎಂ ಕೆ ನಾರಾಯಣಪ್ಪ. ವೀರಸಮುದ್ರ ರಾಮಾಂಜಿನಪ್ಪ.ಶಿವಕುಮಾರ್ ಸಾಕಲ್. ನೆರಳಕುಂಟೆ ನಾಗೇಂದ್ರ.
ವಕೀಲ ಎಚ್.ರಾಮಾಂಜಿನೇಯ ಕನ್ನಮೇಡಿ ಕೃಷ್ಣಮೂರ್ತಿ. ವೆಟರಿನರಿ ಉಗ್ರಪ್ಪ, ಕನ್ನಮೇಡಿ ಎಸ್. ಹನುಮಂತರಾಯಪ್ಪ, ಬಸವಲಿಂಗಪ್ಪ, ಎಂ.ತಮಟೆ ಸುಬ್ಬರಾಯಪ್ಪ. ವಳ್ಳೂರು ನಾಗೇಶ್, ಸಿ ಕೆ ತಿಪ್ಪೇಸ್ವಾಮಿ.ಬಿ.ಪಿ. ಪೆದ್ದಣ್ಣ. ಸಿ ಕೆ ಪುರ ಹನುಮಂತರಾಯಪ್ಪ ಕಲಾತಂಡ. ಕಡಪಲಕರೆ ಪಿ.ಹನುಮಂತರಾಯಪ್ಪ, ಪಿ.ಜಿ.ಕುಮಾರ್, ಅವಿನಾಶ್, ಕೆ.ಪಿ.ಲಿಂಗಣ್ಣ, ದಂಡೋರ ಕಡಮಲಕುಂಟೆ ಹನುಮಂತರಾಯಪ್ಪ, ಹೊಸಹಳ್ಳಿ ಮಲ್ಲಿಕಾರ್ಜುನ, ವಕೀಲ ರಘುನಂದನ್. ವಕೀಲ ಟಿ.ಎನ್.ಪೇಟೆ ರಮೇಶ್, ಮೀನಗುಂಟೆನಹಳ್ಳಿ ನರಸಿಂಹಪ್ಪ, ಕತ್ತಿಕ್ಯಾತನಹಳ್ಳಿ ನಾರಾಯಣಪ್ಪ. ಆ ಬಂಡೆ ಗೋಪಾಲ. ನಲಿಗಾನಹಳ್ಳಿ ಮಂಜುನಾಥ್, ಕಡಪಲಕರೆ ನರಸಿಂಹಪ್ಪ. ಕೆಂಚಪ್ಪ ಮರದಾಸನಹಳ್ಳಿ. ಓಬಳೇಶ್ ಕಡಮಲಕುಂಟೆ. ಇನ್ನು ಮಾದಿಗ ಸಮುದಾಯದ ಮುಖಂಡರು ಹಾಜರಿದ್ದರು.

ವರದಿ: ಶಿವಾನಂದ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ