LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮನಸು ಮಾಡು, ಕರ್ತವ್ಯನಿಷ್ಠನಾಗು, ಕಾದುನೋಡು : ಸಿಪಿಐ ಸಂಜೀವ್ ಕುಮಾರ್ ವಿದ್ಯಾರ್ಥಿಗಳಿಗೆ ಸೂಚನೆ

Advertisement
ಸೇಡಂ : ತಾಲೂಕಿನ ಸರಕಾರಿ ಪ್ರೌಡ ಶಾಲೆ ಮೆದಕ್ ನಲ್ಲಿ ಆಯೋಜಿಸಿರುವ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಧೋಳ ಪೊಲೀಸ್ ಠಾಣೆಯ ಸಿಪಿಐ ಸಂಜೀವ್ ಕುಮಾರ್ ಎನ್ ಕೆ ಅವರು ಭಾಗಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ಈ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯನಿರತರಾಗಬೇಕು ಹೆತ್ತ ತಂದೆತಾಯಿಗಳ ಕನಸು ನನಸಾಗಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಪರೀಕ್ಷೆಯಲ್ಲಿ ಯಾವುದೇ ರೀತಿಯ ಆತಂಕ ಪಡದೆ ಉತ್ತಮ ರೀತಿಯ ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಮತ್ತು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು.

ಮನಸುಮಾಡು, ಕರ್ತವ್ಯನಿಷ್ಠನಾಗು, ಕಾದುನೋಡು ಎಂಬಂತೆ ನಿಮ್ಮ ಭವಿಷ್ಯದಲ್ಲಿ ಏನೇ ಅಡೆತಡೆಗಳು ಎದುರಾದರೂ ನೀವು ನಿಷ್ಠೆಯಿಂದ ನಿಮ್ಮಪ್ರಯತ್ನ ಮಾಡುವಲ್ಲಿ ವಿಫಲರಾಗಬಾರದು ಎಂದು ಸಿಪಿಐ ಸಂಜೀವ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಂತವೀರ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಮಠ ಗುರುಮಠಕಲ್ ಅವರು ಉದ್ಘಾಟಿಸಿ ಮಾತನಾಡಿದರು.

ಎಸ್ಡಿಎಂಸಿ ಅಧ್ಯಕ್ಷರಾದ ಜನಾರ್ದನ ಕಲಾಲ್ ಅವರು ಸ್ವತಃ ಅಡುಗೆ ಮಾಡಿ ಬಂದಿರುವ ಅತಿಥಿಗಳಿಗೆ ಪ್ರೀತಿಯ ಭೋಜನ ನೀಡಿದರು.

ಈ ವೇಳೆ ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಘಟಕ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಮತ್ತು ಪೇನ್ ವಿತರಣೆ ಮಾಡಿದರು.

ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಚಿನ್ನಕಾರ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕೆಂದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಸೇಡಂ ಅವರು ವಿದ್ಯಾರ್ಥಿಗಳಿಗೆ ಭದ್ರತಾ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಕುರಿತು ಕರಾಟೆ ಪ್ರದರ್ಶನ ಮಾಡಿದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳ ಪೋಷಕರೆಲ್ಲರೂ ಸೇರಿ ಹಣ ಜಮಾ ಮಾಡಿ ಶಾಲೆಗೆ ಸಿಸಿ ಕ್ಯಾಮರಾ ವೀಕ್ಷಣೆಗೆ ಒಂದು ಕಂಪ್ಯೂಟರ್ ದೇಣಿಗೆಯಾಗಿ ನೀಡಿದರು.

ಕಾರ್ಯಕ್ರಮದ ಕೊನೆಗೆ ದೀಪ ಹಚ್ಚುವ ಮೂಲಕ ಸ್ನೇಹ ಸಂಬಂಧ ಮತ್ತು ಗುರುಶಿಷ್ಯರ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಚಿನ್ನಕಾರ, ಗುರುಮಠಕಲ್ ಖಾಸಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಎಸ್ಡಿಎಂಸಿ ಅಧ್ಯಕ್ಷರಾದ ಜನಾರ್ದನ ಕಲಾಲ್, ಶಿಕ್ಷಣ ಪ್ರೇಮಿಗಳಾದ ಶಿವಕುಮಾರ್ ಅವಂಟಿ, ಕೇಶವ ರೆಡ್ಡಿ, ಹಿರಿಯ ಶಿಕ್ಷಕರಾದ ನಾಗೇಶ್, ಅಂಬೇಡ್ಕರ್ ಯುವ ಸೇನೆ ವಲಯ ಅಧ್ಯಕ್ಷರಾದ ನರೇಶ್ ಏ ನಾಟಿಕರ್, ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ತಾಲೂಕು ಅಧ್ಯಕ್ಷರಾದ ಶ್ರೀಕಾಂತ್ ತಲಾರಿ, ರೈತಸಂಘ ಮುಖಂಡರಾದ ಸಾಬಪ್ಪ ಅಬ್ಬಗಳ, ಮತ್ತು ಅತಿಥಿ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ