ಚಿಟಗುಪ್ಪ:ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೇವಾ ಜನ ಸಂಪರ್ಕ ಸಭೆ ನಡೆಸಲಾಗುತ್ತಿದ್ದು,ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಮಂಜುನಾಥ ಪಂಚಾಳ ಹೇಳಿದರು.ತಾಲ್ಲೂಕಿನ ಇಟಗಾ ಗ್ರಾಮ ಪಂಚಾಯತನಲ್ಲಿ ಆವರಣದಲ್ಲಿ ಶನಿವಾರ ಜರುಗಿದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಬಂದು ಜನರಿಂದ ಅರ್ಜಿ ಪಡೆದು ಸಮಸ್ಯೆಗಳಿಗೆ ಪರಿಹಾರ ಕೊಡುವುದೇ ಪ್ರಜಾಸೇವಾ ಜನ ಸಂಪರ್ಕ ಸಭೆಯ ಮುಖ್ಯ ಉದ್ದೇಶವಾಗಿದೆ.
ಜನರು ಸರ್ಕಾರದ ಯೋಜನೆ ಮತ್ತು ದಾಖಲೆಗಳಿಗಾಗಿ ಕಛೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಕೆಲಸಗಳಾಗಲು ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ರೂಪಿಸಿದ್ದಾರೆ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾ.ಪಂ ಇಒ ಲಿಂಗರಾಜ ಪಾಟೀಲ,ಬಿಇಒ ವೇಕಟೇಶ್ ಗುಡಾಳ,ಸಿಡಿಪಿಒ ಶಿವಪ್ರಕಾಶ ಹಿರೇಮಠ,ಪರಿಶಿಷ್ಟ ಪಂಡಗ ವರ್ಗ ಅಧಿಕಾರಿ ಶ್ರೀಶೈಲ,ತಾಲ್ಲೂಕು ಆರೋಗ್ಯಧಿಕಾರಿ ಶಿವಕುಮಾರ ಸಿದ್ದೇಶ್ವರ,ಆಹಾರ ನಿರೀಕ್ಷಕಿ ನಮ್ರತಾ,ಅರಣ್ಯ ಅಧಿಕಾರಿ ವೀರಯ್ಯ ಸ್ವಾಮಿ,ಇಟಗಾ ಗ್ರಾಮ ಆಡಳಿತ ಅಧಿಕಾರಿ ವಿಠ್ಠಲ ಸೇಡಂಕರ,ಪಿಡಿಒ ಅಶ್ವಿನಿ,ಜನಾರ್ಧನ ರೆಡ್ಡಿ,ಆರ್.ಐ ಉಮೇಶ,ವಿಎಗಳಾದ ವಿಠ್ಠಲ, ಪುಂಡಲೀಕ,ರಾಧಾ, ರಾಧಿಕಾ,ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ಕಂದಾಯ,ಆರ್‌ಡಿಪಿಆರ್,ಅಬಕಾರಿ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಸೇರಿ ಒಟ್ಟು 45 ಅರ್ಜಿಗಳು ಸಲ್ಲಿಕೆಯಾಗಿವೆ.ಶೀಘ್ರದಲ್ಲಿ ವಿಲೇವಾರಿಗೊಳಿಸಲು ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ -ಮಂಜುನಾಥ ಪಂಚಾಳ,ತಹಸೀಲ್ದಾರರು ಚಿಟಗುಪ್ಪ
ವರದಿ:ಸಜೀಶ ತಾಳಮಡುಗಿ


