LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾ.26 ರಿಂದ ಮಳಖೇಡ ದರ್ಗಾದ ಉರ್ಸ್ ಆರಂಭ

Advertisement
ಮಳಖೇಡ ದರ್ಗಾದ ಉರ್ಸ್ 26 ರಿಂದ ಆರಂಭ! ಮಾನವ ಧರ್ಮ ಚಿಂತನ ಸಭೆಯಲ್ಲಿ ಸಚಿವರು ಶಾಸಕರು ಪೂಜ್ಯರು ಮೌಲ್ವಿಗಳು ಭಾಗಿ: ಹಜರತ್ ಸೈಯದ್ ಶಾಹ ಮುಸ್ತಾಪ ಖಾದ್ರಿ

ಸೇಡಂ:ಕಲ್ಯಾಣ ಕರ್ನಾಟಕದ ಭಾವೈಕ್ಯತೆಯ ಸಂಗಮದ ನೆಲೆಯಾಗಿರುವ ರಾಷ್ಟ್ರಕೂಟ ರಾಜಧಾನಿಯ ಮಳಖೇಡ ಗ್ರಾಮದಲ್ಲಿರುವ ಹಜರತ್ ಸೈಯದ್ ಶಾಹ ಖಲಿಪತ್ ಉರ್ ರಹಮಾನ್ ಖಾದ್ರಿ ರವರ 141ನೇ ಹಾಗೂ ಹಜರತ್ ಅಲಹಜ್ ಸೈಯದ್ ನೇಮತುಲ್ಲಾ ಖಾದ್ರಿ ಅಲ್ ಜಿಲಿ ರವರ 21ನೇ ಉರ್ಸ್ ಜಾತ್ರೆ ನಿಮಿತ್ಯವಾಗಿ ಎನ್, ಆರ್, ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾರ್ಚ್ 26/3/26 ರಿಂದ 29/3/26 ರವರೆಗೆ ಜಾತ್ರೆ ಬಹು ವಿಜೃಂಭಣೆಯಿಂದ ಜರುಗಲಿದೆ ಎಂದು ಮಳಖೇಡ ದರ್ಗಾದ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಮುಸ್ತಾಪ ಖಾದ್ರಿ ಬಾಬಾರವರು ಹೇಳಿದರು.

ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ದರ್ಗಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬಾರವರು ಶನಿವಾರ 28/3/2026 ರಂದು ರಾತ್ರಿ 8:30 ಗಂಟೆಗೆ ನಡಿಯಲಿರುವ ಮಾನವ ಧರ್ಮ ಚಿಂತನ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ, ದೇವಸ್ಥಾನದ ಕಾರ್ಯದರ್ಶಿಗಳಾದ ಬಸವರಾಜ್ ದೇಶಮುಖ್, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್ ಊಡಗಿ, ಶರಣಬಸಪ್ಪ ದರ್ಶನಪುರ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಡಾ. ಅಜಯ್ ಸಿಂಗ್, ಹಾಗೂ ಶಾಸಕರಾದ ಬಿ ಆರ್ ಪಾಟೀಲ್, ಅಲ್ಲಮಪ್ರಭು ಪಾಟೀಲ್, ರಾಜುಗೌಡ ಪಾಟೀಲ್, ಬಸವರಾಜ್ ಮತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ಅಶೋಕ್ ಶಹಾಬಾದಿ, ಜೆಡಿಎಸ್ ನ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್, ರಾಜಶ್ರೀ ಸಿಮೆಂಟ್ ಕಂಪನಿಯ ಯುನಿಟ್ ಹೆಡ್ ಉದಯಕುಮಾರ್ ಪವಾರ್, ಉಪಾಧ್ಯಕ್ಷ ಅಶೋಕ್ ಮೆನೋನ್, ಮತ್ತು ಪಿಡಿಎ ಇಂಜಿನಿಯರ್ ಕಾಲೇಜಿನ ಪ್ರೊಫೆಸರ್ ಸಂಜಯ್ ಮಾಕಲ್, ಸಾಮಾಜಿಕ ಕಾರ್ಯಕರ್ತ ಗುರುಮಿತ ಸಿಂಗ್ ಸಲೋಜ, ಎಸ್ ಬಿ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ್ ಕುಮಾರ್ ನಂದಗಾವ್, ಆಗಮಿಸುತ್ತಿರುವುದರ ಜೊತೆಗೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲಿರುವ ಪೂಜ್ಯರಾದ ಷ ಬ್ರ ರೇವಣಸಿದ್ದ ಮಹಾಸ್ವಾಮಿ, ರುದ್ರಮುನಿ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು, ಶಿವಮೂರ್ತಿ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು, ಮುನೇಂದ್ರ ಶಿವಾಚಾರ್ಯರು, ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು, ಕೊಟ್ರೇಶ್ವರ ಶಿವಾಚಾರ್ಯರು, ಡಾ.ತ್ರಿಮೂರ್ತಿ ಶಿವಾಚಾರ್ಯರು, ಚಂದ್ರಶೇಖರ್ ಶಿವಾಚಾರ್ಯರು, ಸಿದ್ಧವೀರ ಶಿವಾಚಾರ್ಯರು, ಅಪ್ಪರಾವ್ ದೇವಿ ಮುತ್ಯಾ, ಚರಲಿಂಗೇಶ್ವರ ಮಹಾಸ್ವಾಮಿ, ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿ, ಕಾಳಹಸ್ತೇಂದ್ರ ಮಹಾಸ್ವಾಮಿ, ಚಿಕ್ಕನಂಜೇಶ್ವರ ಮಹಾಸ್ವಾಮಿ, ಗುರುಲಿಂಗ ಮಹಾಸ್ವಾಮಿ, ಕೊರಣೇಶ್ವರ ಮಹಾಸ್ವಾಮಿ, ಪಂಚಾಕ್ಷರಿ ಮಹಾಸ್ವಾಮಿ, ಮಲ್ಲಯ ಮಹಾಸ್ವಾಮಿ, ಮಲ್ಲಣ್ಣಪ್ಪ ಮಹಾರಾಜರು, ಹಾಗೂ ವಿವಿಧ ದರ್ಗಾಗಳ ಬಾಬರಾದ ಹಜರತ್ ಸಯ್ಯದ್ ಶಹ ಮಹಮ್ಮದ್ ಅಲಿ ಅಲ್ ಹುಸೇನಿ, ಹಜರತ್ ಸೈಯದ್ ಶಾಹ ಯದುಲಾ ಹುಸೇನಿ, ಇಸ್ಲಾಮುದ್ದೀನ್ ಖಾದ್ರಿ, ಅಬ್ಜಲುದ್ದೀನ್ ಜುನೇಧಿ, ಜಲಾಲ್ ಹುಸೇನಿ, ಇಸ್ಮಾಯಿಲ್ ಹುಸೇನಿ, ಹಿದಾಯತ್ ಉಲ್ಲಾ ಖಾದ್ರಿ, ಮುತುರ್ಜಾ ಹುಸೇನಿ ಅಲ್ಲ ಖಾದ್ರಿ, ಮೈನುದ್ದೀನ್ ಹುಸೇನಿ, ಮಹಮ್ಮದ್ ಸದ್ರೋದ್ದೀನ್ ಜಂಜಾನಿ, ಅನ್ವರ್ ಹುಸೇನಿ ಖಾದ್ರಿ, ಅಬಿದ್ ಖಾದ್ರಿ, ಮೌಲಾನ ಅಬ್ದುಲ್ ಹಕ್ಕಿಮ್ ವಿಖಾರ್ ಅಶ್ರಪಿ, ಅಬ್ದುಲ್ ಫೈಜ್ ಉಸೇನಿ, ದಿವ್ಯ ಸಾನಿಧ್ಯ ವಹಿಸಲಿದ್ದಾರೆ ವಿವರವಾಗಿ ಬಾಬಾರವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ರಾಜೇ ಶಿವಶರಣಪ್ಪ ಬಿಜನಳ್ಳಿ, ಸುಭಾಷ್ ಚಂದ್ರ ನರೋಣ,ಮಲ್ಲಪ್ಪ ಅರಬೋಳ,ಭಗವಾನ್ ಬೋಚಿನ್, ಪೀರಪ್ಪ ಕಡ್ಲಿ, ಕುಪ್ಪಣ್ಣ ಎಮ್ಮಿ ಇದ್ದರು.
ಉರ್ಸ್ "ಜಾತ್ರೆ" ಕಾರ್ಯಕ್ರಮ ವಿವರ:
ಮಾರ್ಚ್ 26ರಂದು ಗುರುವಾರ ಪ್ರಾರ್ಥನೆ "ಗುಸುಲ್ ಶರೀಫ್" ಮಾರ್ಚ್ 27ರಂದು ಶುಕ್ರವಾರ "ಸಂದಲ್" ಮಳಖೇಡ,ಹೂಡಾ.ಬಿ, ಸಂಗಾವಿ, ಮಳಖೇಡ ರೈಲ್ವೆ ಸ್ಟೇಷನ್, ರಾಜಶ್ರೀ ಸಿಮೆಂಟ್ ಫ್ಯಾಕ್ಟರಿ, ಕುನ್ನೂರ್, ಹಾಗೂ ದಿಗ್ಗಾಂವ್ ಗ್ರಾಮಗಳಿಂದ ಸಂದಲ್ ಮೆರವಣಿಗೆಯ ನಂತರ ಹಜರತ್ ಸೈಯದ್ ಶಾಹ ಮುಸ್ತಾಪ ಖಾದ್ರಿ ಬಾಬಾರವರಿಂದ ಅಮೃತ ಹಸ್ತದಿಂದ ಗಂದಲೇಪನ, ಮಾರ್ಚ್ 28ರಂದು ಶನಿವಾರ "ಚಿರಾಗಾಂ" ದೀಪಾಲಂಕಾರ ರಾತ್ರಿ 8:30 ಗಂಟೆಗೆ ಮಳಖೇಡದಿಂದ ಪಂಖಾ ಮೆರವಣಿಗೆ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಮುಸ್ತಾಪ ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ "ಮಾನವ ಧರ್ಮ ಚಿಂತನ ಸಭೆ"ನಂತರ ಖವ್ವಾಲಿ ಹಾಗೂ ಗೀಗಿ ಕಾರ್ಯಕ್ರಮಗಳು ಜರಗುವವು, ಹಾಗೂ ಮಾರ್ಚ್ 29 ರಂದು ರವಿವಾರ ಜಿಯಾರತ್ "ಫಾತೆಹಾ ಖಾನಿ" ಮುಂಜಾನೆ 7 ಗಂಟೆಗೆ ಫಾತೆಹಾ ಖಾನಿ, ಪುಷ್ಪಾರ್ಚನೆ, ನಂತರ ಹಜರತ್ ಸಜ್ಜಾದಾ ನಸೀನರವರ ಅಮೃತ ಹಸ್ತದಿಂದ ಪ್ರಸಾದ ವಿಸ್ತರಣೆ ಹಾಗೂ ಮಳಖೇಡ ಹಾಗೂ ಹೂಡಾ,ಬಿ ಭಕ್ತರರಿಂದ ಬೆಳ್ಳಿ ಕಡೆಗಳು ಹಾಗೂ ಬೆಳ್ಳಿ ಗಧೆಯ ಕುಸ್ತಿ ಜರುಗಲಿದೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ