LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮನುಷ್ಯನ ಸುಖೀ ಜೀವನಕ್ಕೆ ಆರೋಗ್ಯ ಅತ್ಯಗತ್ಯ : ಮಂಡ್ಯ ಮಲ್ಲೇಶ್

Advertisement
ಬೆಂಗಳೂರು : ಮನುಷ್ಯನ ಸುಖೀ ಜೀವನಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಅಡಿಪಾಯ. "ಆರೋಗ್ಯವೇ ಭಾಗ್ಯ" ಎಂಬಂತೆ, ಉತ್ತಮ ಆರೋಗ್ಯವು ರೋಗ ಮುಕ್ತ ಜೀವನದಿಂದ ದೇಶ ಬಲಿಷ್ಠವಾಗುತ್ತದೆ ಎಂದು ಬಡವರ ಬಂಧು ಕೊಡುಗೈ ದಾನಿ ಸಮಾಜ ಸೇವಕ ಮಂಡ್ಯ ಮಲ್ಲೇಶ್ ಹೇಳಿದರು.

ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ತಿಗಳರಪಾಳ್ಯ ಮುಖ್ಯ ರಸ್ತೆಯ ಅಣ್ಣಮ್ಮ ಸರ್ಕಲ್ ಸಮಾಜ ಸೇವಕ ಮಂಡ್ಯ ಮಲ್ಲೇಶ್ ಅವರ ನೇತೃತ್ವದಲ್ಲಿ "ವಿಶ್ವ ಮಹಿಳಾ ದಿನಾಚರಣೆ" ಮತ್ತು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ದೀರ್ಘಾಯುಷ್ಯ, ದೈನಂದಿನ ಕಾರ್ಯಕ್ಷಮತೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದು ಜೀವನದ ಗುಣಮಟ್ಟವನ್ನು ಹೆಚ್ಚಿಸಿ, ಸಕ್ರಿಯ ಮತ್ತು ಉತ್ಪಾದಕ ಜೀವನ ನಡೆಸಲು, ಹಾಗೂ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದೆ ಎಂದರು.

ಮತ್ತು ಈ ಆರೋಗ್ಯ ಶಿಬಿರಕ್ಕೆ ರಾಯಲ್ ಹೆಲ್ತ್ ಕೇರ್ ಹಾಸ್ಪಿಟಲ್ ಪುಷ್ಯ ಕಣ್ಣಿನ ಆಸ್ಪತ್ರೆ ಸುಶ್ರುತ ರಕ್ತ ನಿಧಿ ಪ್ರಸ್ತೂತಿ ಸಹಯೋಗದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಇದೆ ವೇಳೆ ಉಚಿತ ಕನ್ನಡಕ ವಿತರಿಸಿ ಮಂಡ್ಯ ಮಲ್ಲೇಶ್ ಮನವಿ ಮಾಡಿ ಕೊಂಡರು.

ಈ ಸಂದರ್ಭದಲ್ಲಿ ಹನುಮಂತು, ರಾಘು, ರಾಜಣ್ಣ , ಕುಳ್ಳೇಗೌಡ್ರು , ಶ್ರೀನಿವಾಸ್ , ಅಂಗಡಿ ಮಂಜಣ್ಣ, ಮೂರ್ತಿ, ಸಿದ್ದು, ರವಿ, ನಂಜಪ್ಪ, ಡಿ ಗ್ರೂಪ್ ಅನಂತು, ಹರೀಶ, ದಿಲೀಪ, ದೀಪು, ಮಹಿಳೆಯರು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ