ಕುಂದಗೋಳ: ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಶಾಸಕರಾದ ಎಮ್.ಆರ್.ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಾಟೀಲ ಸರ್ಕಾರ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ದಿನನಿತ್ಯ ಕಚೇರಿಗಳಿಗೆ ಅಲೆದಾಡಬಾರದು ಸರ್ಕಾರಿ ನೌಕರರು ವಿನಾ ಕಾರಣ ಸಾರ್ವಜನಿಕರ, ರೈತರ ಕೆಲಸಗಳನ್ನು ವಿಳಂಬ ಮಾಡದೇ ತ್ವರಿತವಾಗಿ ಕೆಲಸ ಕಾರ್ಯಗಳು ಜರುಗಬೇಕೆಂಬ ಉದ್ದೇಶದಿಂದ ಹೊಸದಾಗಿ ಜಾರಿಯಾಗಿರುವ ಈ ಪ್ರಜಾ ಇಲಾಖೆ ಇನ್ನಷ್ಟು ಶಕ್ತಿ ತುಂಬಬೇಕಾದರೆ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಈ ಒ್ರಜಾ ಆಂದೋಲನ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಸಭೆಯಲ್ಲಿ ಬರುವ ಅರ್ಜಿಗಳ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದಾಗ ಈ ಪ್ರಜಾ ಆಂದೋಲನ ಇಲಾಖೆಗೆ ಸಂದಗೌರವ ಸಿಕ್ಕಂತಾಗುತ್ತದೆ ಎಂದು ಶಾಸಕರಾದ ಎಮ್.ಆರ್.ಪಾಟೀಲ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.
ಪಂಚಗ್ಯಾರಂಟಿ ಸಮೀತಿ ಅಧ್ಯಕ್ಷ ನೆಹರೂ ಪಾಟೀಲ ಮಾತನಾಡಿ ಈ ಪ್ರಜಾ ಆಂದೋಲನ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ಕಳಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಮ್.ಆರ್.ಪಾಟೀಲ ಹಾಗೂ ತಹಶೀಲ್ದಾರ ರಾಜು ಮಾವರಕರ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಸುಮಾರು 16 ಅರ್ಜಿಗಳನ್ನು ಪರಿಶೀಲನೆ ಮಾಡಲಾಯಿತು. ಇದರಲ್ಲಿ ಸಂಶಿ ಗ್ರಾಮದ. ಕುಡಿಯುವ ನೀರಿನ ಕೆರೆಯಲ್ಲಿ ಅಕ್ರಮ ಮಣ್ಣಿನ ಮಾರಾಟ, ಹಾಗೂ ಶಿರೂರ, ಚಾಕಲಬ್ಬಿ ಕುಡಿವ ನೀರಿನ ಶುದ್ಧ ಘಟಕಗಳನ್ನು ದುರಸ್ತಿ ಮಾಡಿಸುವ ಕುರಿತು ಜಿಲ್ಲಾ ಪಂಚಾಯತ ಸಹಾಯಕ ಅ ಧಿಕಾರಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ ಪ್ರಭಾರಿ ಇಒ ಶ್ರೀಮತಿ ರೇಣುಕಾ ಗಡ್ಡದವರ, ಸಿಪಿಐ ಸಮೀರ ಮುಲ್ಲಾ, ಗ್ರೇಡ್2 ತಹಶೀಲ್ದಾರ ಶೇನ್ವಿ ಹಾಗೂ ವಿವಿದ ಗ್ರಾಮಗಳಿಂದ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ;ಸುಧೀರ್ ಕುಲಕರ್ಣಿ


