ತುರುವೇಕೆರೆ : ಪಟ್ಟಣದ ಬಿಆರ್‌ಸಿ ಕಛೇರಿಯಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ 2026-27 ನೇ ಸಾಲಿನ ತಾಲ್ಲೂಕು ಮಟ್ಟದ ಮಕ್ಕಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಹಾಗೂ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಯಸಂದ್ರದ ಸೌರಭ ಕಾನ್ವೆಂಟ್ ಶಾಲೆಯ ಸ್ಕೌಟ್ ತಂಡದ ಪರಿಣಯ್ ಸಿ.ಎಸ್, ನೂತನ್ ಕೆ.ವೈ, ಜಯಚಂದ್ರ ಟಿ.ಬಿ, ಶಶಾಂಕ್ ಸಿ.ಎಂ., ಚಿರಾಗ್ ಆರ್, ಆರ್ಯಕೆಂಪೇಗೌಡ, ಸಾಕಿಬ್ ಅರ್ಮಾನ್ ತಂಡ ಪ್ರಥಮ ಸ್ಥಾನ, ಕಬ್ ವಿಭಾಗದಲ್ಲಿ ಅಬ್ದುಲ್ ವಹಾಬ್ ಅರ್ಫಾನ್, ಮೋಹನ್ ಯಾದವ್, ಲೋಹಿತ್ ಕುಮಾರ್ ಯಾದವ್,ಹರಿ ರಿಷಿ, ಸಫೀರ್, ಪಲ್ವಿತ್, ಪ್ರಥಮ ಸ್ಥಾನ, ಬುಲ್ ಬುಲ್ ವಿಭಾಗದಲ್ಲಿ ಮನಸ್ವಿ ಯು., ನಿದಾಹರ್ಮೈನ್, ಮಾರಿಯ ಫಾತಿಮಾ, ಧನಲಕ್ಷ್ಮಿ, ಅಲಿಯಾ ಫಾತಿಮಾ, ವರ್ಷಿಣಿ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ, ಗೈಡ್ ವಿಭಾಗದಲ್ಲಿ ಉಮ್ಮೆ ಕುಲ್ಸುಮ್, ಅಲ್ಫಿಯಾ ಬಾನು, ಪೂರ್ವಿಕ, ಪೂರ್ಣಿಮಾ, ಸಾರಿಯಾ ಕೌಸರ್, ಆಲಿಷ ತಬಸುಮ್, ಹುಮ್ಯಾರ ಕೌಸರ್, ವಿನುತಾ ತಂಡ ದ್ವಿತೀಯ ಸ್ಥಾನ ಗಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಆರ್.ಸಿ ಸುರೇಶ್ ಮಾತನಾಡಿ, ಶಿಕ್ಷಕರ ಬೋಧನಾ ಕೌಶಲ್ಯಗಳನ್ನು ಹೆಚ್ಚಿಸಲು, ನವೀನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು, ತರಗತಿಯಲ್ಲಿ ತಂತ್ರಜ್ಞಾನ ಮತ್ತು ಹೊಸ ಕಲಿಕಾ ಪರಿಕರಗಳನ್ನು ಬಳಸಲು, ಶಿಕ್ಷಕರಲ್ಲಿ ನಾಯಕತ್ವ ಗುಣ, ಸಂವಹನ ಮತ್ತು ವೃತ್ತಿಪರ ಅಭಿವೃದ್ಧಿಗೆ ಕಾರ್ಯಾಗಾರ ಸಹಾಯ ಮಾಡುತ್ತವೆ ಎಂದರು.
ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ತ್ಯಾಗ, ಬಲಿದಾನದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮದ ಬೆಳೆಸಬೇಕೆಂದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಂಡಗಳನ್ನು ಅಭಿನಂದಿಸಲಾಯಿತು.
ಸ್ಥಳೀಯ ಸಂಸ್ಥೆ ಘಟಕದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಕಮಲರಾಜು, ಎಡಿಸಿ ಮಂಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, ದಿನೇಶ್, ಜಿಲ್ಲಾ ತರಬೇತಿದಾರ ಎಲ್.ಟಿ. ಗಂಗಾಧರ್, ಸೌರಭ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಕಲ್ಪನಾಮುನಿರಾಜು, ಸ್ಕೌಟ್ ಮಾಸ್ಟರ್ ಮುನಿರಾಜು, ಶಿಕ್ಷಕರಾದ ಗುರುಸಿದ್ದಮ್ಮ, ಲಲಿತಾ ಭಟ್, ಶಿವಮೂರ್ತಿ ಪ್ರವೀಣ್ ಕುಮಾರಿ ಸೇರಿದಂತೆ ಹಲವು ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಗಿರೀಶ್ ಕೆ ಭಟ್


