LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ದಲಿತ ಯುವಕನ ಮೇಲೆ ಹಲ್ಲೆ ಖಂಡಿಸಿ ಪೋಲಿಸ್ ಠಾಣೆ ಎದುರಗಡೆ ಪ್ರತಿಭಟನೆ

Advertisement
ಗೋಕಾಕ:ಚರಂಡಿ ಕಾಮಗಾರಿ ಮಾಡುತಿದ್ದ ದಲಿತ ವ್ಯಕ್ತಿಯ ಮೇಲೆ ನ್ಯಾಯವಾದಿ ಹಲ್ಲೆ ಮಾಡಿದ್ದನ್ನು ಖಂಡಿಸಿ ವಿವಿದ ದಲಿತ ಸಂಘಟನೆಯ ಮುಖಂಡರು ಗೋಕಾಕ ಡಿಎಸ್ ಪಿ ಪೋಲಿಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡಿ ತಕ್ಷಣ ತಪ್ಪಿಸ್ತರನ್ನು ಬಂದಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ಈಶ್ವರ ಗುಡಜ ಮಾತನಾಡಿ ಕೆಲಸ ಮಾಡಿ ಕೂಲಿ ಕೆಲಸ ಮಾಡುವ ದಲಿತ ವ್ಯಕ್ತಿ ಶೆಟ್ಟೆಪ್ಪ ಮೇಸ್ತ್ರಿ ಇತನಿಗೆ ನಮ್ಮ ಜಾಗೆಯ ವಿಷಯ ಕೆಳಲಿಕ್ಕೆ ನಿನ್ಯಾರು ಎಂದು ಮಂಜುಳಾ ಗಿಡ್ನವರ ಮತ್ತು ಚಂದನ ಗಿಡ್ನವರ ಇತ ಶೆಟ್ಟೆಪ್ಪನಿಗೆ ಸ್ಥಳದಲ್ಲಿದ್ದ ಕಬ್ಬಿನ ರಾಡದಿಂದ ಮನಸೊ ಇಚ್ಚೆ ಹಲ್ಲೆ ಮಾಡಿದ್ದ ಪರಿಣಾಮ ಗಂಭೀರ ಗಾಯಗೊಂಡ ಶೆಟ್ಟೆಪ್ಪ ಸರಕಾರಿ ಆಸ್ಪತ್ರೆಯಲ್ಲಿ ದಾಖಾಲಗಿ ಜೀವನ್ಮರಣದ ನಡುವೆ ಹೋರಾಡುತ್ತಿರುತ್ತಾನೆ. ಈ ಘಟನೆಯಾಗಿ 3 ದಿನಗಳಾದರೂ ಸಹ ಪೋಲಿಸ್ ಇಲಾಖೆಯವರು ಬಂದಿಸಿಲ್ಲ,



ತಕ್ಷಣ ಅರೋಪಿಗಳನ್ನು ಬಂದಿಸಿದ್ದರೆ ಸ್ಥಳದಲ್ಲಿಯೆ ಬಂದಿಸುವವರೆಗೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಇನ್ನೊರ್ವ ದಲಿತ ಮುಖಂಡ ಸತೀಶ ಹರಿಜನ ಮಾತನಾಡಿ ಗೋಕಾಕ ಜಾತ್ರೆ ನಿಮಿತ್ಯ ನಗರದಲ್ಲಿ ಅಬಿವೃದ್ದಿ ಕೆಲಸವನ್ನು ಶಾಸಕ ರಮೇಶ ಜಾರಕಿಹೋಳಿಯವರು ಮಾಡಿಸುತಿದ್ದಾರೆ, ಅಬಿವೃದ್ದಿ ಕೆಲಸಕ್ಕೆ ಅಡ್ಡಿಪಡಿಸುವ ಹುನ್ನಾರದಿಂದ ದಲಿತರನ್ನು ಗುರಿಯಾಗಿ ಇಟ್ಟುಕೊಂಡು ಗೋಕಾಕದಲ್ಲಿ ಜಾತಿ ದ್ವೇಷ ಬೀಜ ಬಿತ್ತುವ ಕಾರ್ಯವನ್ನು ಮಾಡುತಿದ್ದರಿ,

ಆದರೆ ಶಾಸಕ ರಮೇಶ ಜಾರಕಿಹೋಳಿಯವರು 30 ವರ್ಷವಾದರೂ ಯಾವುದೆ ರೀತಿಯ ಜಾತಿಬೇದ ಮಾಡಿಲ್ಲ,
ನಿಮಗೇನಾದರೂ ಕೇಲಕುವ ಹಾಗಿದ್ದರೆ ಶಾಸಕರ ಕಚೇರಿಗೆ ಬಂದು ಕೇಳಿ ಅದನ್ನ ಬಿಟ್ಟು ದಲಿತರ ಮೇಲೆ ಹಲ್ಲೆ ಮಾಡೊದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.



ಈಗಾಗಲೆ ಚಂದನ ಗಿಡ್ನವರ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣ ಇದ್ದರು ಕೂಡ ಮತ್ತೆ ದಲಿತನ ಮೇಲೆ ಹಲ್ಲೆ ಮಾಡಿದ್ದನ್ನು ನೋಡಿದರೆ ಇವರು ದಲಿತರನ್ನೆ ಗುರಿಮಾಡಿದ್ದಾರೆ.ಅದಕ್ಕಾಗಿ ಪೊಲಿಸ್ ಇಲಾಖೆ ತಕ್ಷಣ ಇವರನ್ನು ಬಂದಿಸಬೇಕೆಂದು ಒತ್ತಾಯಿಸಿ ಗೋಕಾಕ ಡಿಎಸ್ಪಿ , ಮತ್ತು ಸಚಿವ ಸತೀಶ ಜಾರಕಿಹೋಳಿ ಇವರ ಗೃಹ ಕಚೇರಿಯಲ್ಲಿ ಮತ್ತು ಶಾಸಕ ರಮೇಶ ಜಾರಕಿಹೋಳಿ ಅಪ್ತಸಹಾಯಕರಿಗೆ ಆರೋಪಿತರನ್ನು ಬಂದಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗೋಕಾಕ ನಗರ ಪಿಎಸ್ಐ, ಕೆ ,ಬಿ,ವಾಲಿಕಾರ ಸೇರಿದಂತೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ದಲಿತ ಮುಖಂಡರು ಉಪಸ್ಥಿತರಿದ್ದರು.

ವರದಿ:ಮನೋಹರ ಮೇಗೇರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ