LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಕೇವಲ 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ 

Advertisement

ಶಿವಮೊಗ್ಗ: ಗಾಂಜಾ ಸೇವನೆಯ ಮತ್ತಿನಲ್ಲಿ ಯುವಕರು ಕೂಲಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಅಶೋಕನಗರದ ತುಂಗಾ ಚಾನೆಲ್ ಬಳಿ ಕೇವಲ 500 ರೂ.ಗಾಗಿ ಮಹಮ್ಮದ್ ಅಲಿ ಎಂಬ ಕೂಲಿ ಕಾರ್ಮಿಕನನ್ನು ಹತ್ಯೆ ಮಾಡಲಾಗಿದೆ.ಮಹಮ್ಮದ್ ಅಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಶನಿವಾರ ರಾತ್ರಿ ಗಾಂಜಾ ಮತ್ತಿನಲ್ಲಿದ್ದ ಯುವಕರು ಬೈಕ್ ನಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಅಲಿ ಅವರ ಕೈಯಲ್ಲಿ 500 ರೂ. ನೋಡಿದ ಯುವರು ಹಣ ಕೊಡುವಂತೆ ಕೇಳಿದ್ದಾರೆ. ಅಲಿ ಹಣ ಕೊಡಲು ನಿರಾಕರಿಸಿದ್ದಾರೆ.

ಘಟನೆ ವೇಳೆ ಯುವಕರು ಗಾಂಜಾ ಸೇವನೆಯ ಮತ್ತಿನಲ್ಲಿದ್ದರು ಎನ್ನಲಾಗಿದ್ದು, ₹500 ಹಣದ ವಿಚಾರವಾಗಿ ಮಹಮ್ಮದ್ ಅಲಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದಾರೆ.

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕರು ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಅಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶೇಷ ಭಾರತ ತಂಡಕ್ಕೆ ಇರಾಣಿ ಟ್ರೋಫಿ 2028ಕ್ಕೂ ರಾಜ್ಯದಲ್ಲಿ ನಮ್ಮದೇ ಸರ್ಕಾರ : ಸಿದ್ದರಾಮಯ್ಯ ಯೋಧನ ಮೃತದೇಹ ಒಯ್ಯುತ್ತಿದ್ದ ಸೇನಾ ಆಂಬ್ಯುಲೆನ್ಸ್ ಟ್ರಕ್‌ಗೆ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವುನಾವು ಬದುಕಿದ್ದೇವೆ, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ : ಜೀವಂತ ಮತದಾರರಿಂದ ಆಕ್ರೋಶ ಕೇವಲ 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ ಜಿಎವಿಎಸ್ ಸಂಕಲ್ಪ ಮಹಾ ಸಮಾವೇಶ ಯಶಸ್ಸಿಗೆ ನಾಳೆ ಮಾನ್ವಿಯಲ್ಲಿ ಬೈಕ್ ಜಾಗೃತಿ ರ್ಯಾಲಿ: ಆರ್ ಮುತ್ತುರಾಜ ಶ್ರೇಷ್ಟಿಬೆಂಗಳೂರು–ಮುಂಬೈ ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ ಸ್ಲೀಪರ್ ರೈಲು: ರಾಯಚೂರಿಗೂ ನಿಲುಗಡೆ ಜನರಿಗೆ ಅನುಕೂಲ : ಚಂದ್ರು ಜಾನೇಕಲ್ಆಸ್ಟ್ರೇಲಿಯಾ- ದ. ಅಪ್ರಿಕಾ ಮೊದಲ ಟೆಸ್ಟ್ 9 ರಂದು ಚಿತ್ರರಂಗದ ಹಿರಿಯ ನಟಿ ಲಲಿತಮ್ಮ ವಿಧಿವಶ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ