LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ನಿಪ್ಪಾಣಿ ಪೊಲೀಸರು

Advertisement
8 ಲಕ್ಷ ರೂಪಾಯಿಗಳ ಮೌಲ್ಯದ 16 ದ್ವಿಚಕ್ರ ವಾಹನಗಳು ವಶಕ್ಕೆ

ನಿಪ್ಪಾಣಿ : ಗ್ರಾಮೀಣ ಪೊಲೀಸ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ 8 ಲಕ್ಷ ರೂಪಾಯಿಗಳ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಮಾನಕಾಪುರ ಗ್ರಾಮದ ನಾಗೇಶ್ ತಾನಾಗಿ ಕೆಂಗಾರ್ ವಯಸ್ಸು 26 ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬೆಂಡೆತ್ತಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ತಿಳಿದ ಅಧಿಕ ಮಾಹಿತಿಯಂತೆ ದಿನಾಂಕ 30 3 2026ರಂದು ಮಧ್ಯಾಹ್ನ 12:30ಕ್ಕೆ ಕೋಡ್ನಿ ಗ್ರಾಮದ ಹದ್ದಿನಲ್ಲಿಯ ಬೂದಿಹಾಳ ರಸ್ತೆಯಲ್ಲಿಂದ ದ್ವಿಚಕ್ರ ವಾಹನ ಕಳುವಾಗಿದೆ.



ಎಂದು ಆದಿತ್ಯ ಕೌಲೋಕರ್ ಅವರು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲು ಮಾಡಿಕೊಂಡು ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ನಿಪ್ಪಾಣಿ ಸಿಪಿಐ ಬಿಎಸ್ ತಳವಾರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಉಪ ವಿಭಾಗದ ಡಿ ಎಸ್ ಪಿ ಗೋಪಾಲಕೃಷ್ಣ ಗೌಡರ ಮತ್ತು ನಿಪ್ಪಾಣಿ ಪಿಎಸ್ಐ ಶಿವರಾಜ್ ನಾಯಕವಾಡಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಆರ್ ವೈ ಮೇಲ್ಗಡೆ ,ಆರ್ ಬಿ ಪಾಟೀಲ, ಎಂ ಎಫ್ ನದಾಫ್ ಸೇರಿ ವಿಶೇಷ ತಂಡವನ್ನು ರಚಿಸಿ ಶನಿವಾರ ದಿನಾಂಕ 4 ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡ್ನಿ ಗಾಯಕನವಾಡಿ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುವಾಗ ಆರೋಪಿ ನಾಗೇಶ ಕೆಂಗಾರ ನೋಂದಣಿಯಾಗಿದೆ ಇದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಲಾಗಿ ದಾಖಲೆಗಳಿಲ್ಲದೆ ಇರುವುದು ಕಂಡುಬಂತು. ಈ ಸಮಯದಲ್ಲಿ ಆರೋಪಿಗೆ ಪೊಲೀಸರು ತಮ್ಮ ಸಮವಸ್ತ್ರ ತೋರಿದಾಗ 20 ದಿನಗಳ ಹಿಂದೆ ಕೋಡ್ನಿ ಗ್ರಾಮದ ಪರಿಸರದಲ್ಲಿಯ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಹೆಚ್ಚಿನ ತನಿಖೆ ನಡೆಸಲಾಗಿ ಆರೋಪಿಗಳ ಬಳಿ ವಿವಿಧ ಕಂಪನಿಗಳ ಒಟ್ಟು 16 ಬೈಕುಗಳಿದ್ದು ಅದರ ಮೌಲ್ಯ ಬರೋಬರಿ 8 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಹಾಗೂ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ಅವರು ಸದರಿ ತನಿಖೆ ನಡೆಸಿದ ನಿಪ್ಪಾಣಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

ವರದಿ : ಮಹಾವೀರ ಚಿಂಚಣೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ