ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಲಯ ಅಧಿಕಾರಿಗಳು ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇಡೀ ದಾಳಿ ನಡೆಸಿದ್ದು ನನಗೆ ಯಾವುದೇ ರೀತಿ ಡ್ಯಾಮೇಜ್ ಇಲ್ಲ. ಇಡಿ ಅಧಿಕಾರಿಗಳು ನೋಟಿಸ್ಕೊಂಡರೆ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಆಫ್ರಿಕದಲ್ಲಿ ಹೂಡಿಕೆಯ ಬಗ್ಗೆ ಅನುಮಾನ ಎಂದು ಹೇಳಿದ್ದಾರೆ. ಹೂಡಿಕೆ ಮಾಡಿಲ್ಲ ಅಂತ ಇಡೀ ಅಧಿಕಾರಿಗಳಿಗೆ ಹೇಳಿದ್ದೇನೆ. ಹೆಚ್ಚಿನ ತನಿಖೆ ಮಾಡಬೇಕು ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ ನೋಟಿಸ್ ಕೊಟ್ಟು ಕರೆಸಿದರೆ, ನಾನು ಸರಿಯಾದ ಉತ್ತರ ಕೊಡುತ್ತೇನೆ.
ಆರೋಪದ ಮೇಲೆ ಯಾವ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಇನ್ನು ಬಹಳ ಪ್ರಕ್ರಿಯೆ ಇದೆ ಮೂರರಿಂದ ಆರು ತಿಂಗಳ ಅವಕಾಶ ಇದೆ. ಅನುಮಾನಾಸ್ಪದ ಅಂತ ಹೇಳಿದ್ದಾರೆ. ಇದೇ ಫೈನಲ್ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇಡಿ ಅಧಿಕಾರಿಗಳು ದೂರು ಕೊಟ್ಟವರ ಬಗ್ಗೆ ನನಗೆ ಗೊತ್ತಿದೆ ಸಿಎಂ ಗೆ ದೂರು ಕೊಟ್ಟವರ ಬಗ್ಗೆ ಹೇಳಿದ್ದೇನೆ ಅವರಿಗೆ ಗೊತ್ತಿದೆ ಪಕ್ಷದವರು ದೂರು ಕೊಟ್ಟಿದ್ದಾರೆ ಅಂತ ಅಲ್ಲ ಎಂದು ತಿಳಿಸಿದರು.
ಜಾರಕಿಹೊಳಿ ಅವರನ್ನು ವಿಜಯ್ ಮಲ್ಯ ಬೆಂಬಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದವರು ಥ್ಯಾಂಕ್ಸ್ ಅಂತ ಹೇಳಿ ನಕ್ಕಿದ್ದಾರೆ ಅವರು ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದರು ಹಾಗಿದ್ದರೆ ಎಂದು ಸತೀಶ್ ಜಾರಕಿಹೊಳಿ ಹಾಸ್ಯವಾಗಿ ಹೇಳಿದರು.


