LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೈತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಪ್ರಕಾಶ್ ಖಂಡ್ರೆ ಆಗ್ರಹ

Advertisement

ಭಾಲ್ಕಿ: ತಾಲೂಕಿನ ವರವಟ್ಟಿ (ಬಿ) ಗ್ರಾಮದ ರೈತ ಬೋಲಾನಂದ ಸ್ವಾಮಿ ಚಿಕಲೆ (40) ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಸಂತಾಪ ವ್ಯಕ್ತಪಡಿಸಿದರು.

ಮೃತ ರೈತ ಬೋಲಾನಂದ ಸ್ವಾಮಿ ಚಿಕಲೆ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಕಾಶ್ ಖಂಡ್ರೆ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಧನಸಹಾಯ ನೀಡಿ ಕುಟುಂಬದೊಂದಿಗೆ ತಾವು ಇರುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತ ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸ್ಪಂದಿಸಬೇಕು. ಮೃತ ರೈತನ ಕುಟುಂಬಕ್ಕೆ ತಕ್ಷಣ ₹5 ಲಕ್ಷ ಪರಿಹಾರಧನ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

news_1789207111_0_638.webp

 

ರೈತರು ಸಾಲ, ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ರೈತರ ₹5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು ಹಾಗೂ ಪ್ರತಿ ಎಕರೆಗೆ ₹50 ಸಾವಿರ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಮುಂದಾಗಬಾರದು. ಸಂಕಷ್ಟದ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದೆ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ರೈತರ ನೆರವಿಗೆ ಸರ್ಕಾರ ಹಾಗೂ ಸಮಾಜ ಸದಾ ನಿಲ್ಲಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವೆಂಕಟರಾವ್ ಬಿರಾದಾರ, ಗುರಯ್ಯಾ ಸ್ವಾಮಿ, ರಾಜಶೇಖರ್ ಬಿರಾದಾರ, ಹವಗಿರಾವ್ ಬಚ್ಚಣ್ಣ, ಶಂಕರ್ ರಾವ್ ಬಿರಾದರ್, ಪಂಡಿತ್ ಬಿರಾದರ್ ಸೇರಿದಂತೆ ಗ್ರಾಮಸ್ಥರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ವರದಿ : ಸಂತೋಷ ಬಿಜಿ ಪಾಟೀಲ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಕ್ಸ್ ಸಹಕಾರದ ಎರಡು ದಶಕಗಳ ನೆನಪಿನ ವಿಶೇಷ ಅಂಚೆ ಚೀಟಿಗಳ ಬಿಡುಗಡೆ ಸಿಎಂ ಖಡಕ್ ಸೂಚನೆ ಬೆನ್ನಲ್ಲೇ ರಾಜ್ಯಾದ್ಯಂತ 800 ಬಾಲ ಕಾರ್ಮಿಕರ ರಕ್ಷಣೆಗ್ರಾಮೀಣ ಭಾಗದಲ್ಲೂ ತಜ್ಞ ವೈದ್ಯರ ಸೇವೆ ಕಲ್ಪಿಸಲು ಮಹತ್ವದ ಕ್ರಮ: ಆಸ್ಪತ್ರೆಗಳ ದತ್ತು ನೀಡಲು ಸರ್ಕಾರ ನಿರ್ಧಾರ ಬಿಜೆಪಿ ಅಧಿಕಾರಕ್ಕೆ ಬರುವುದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ. ವೈ ವಿಜಯೇಂದ್ರಗಮನ ಸೆಳೆದ ಜಗದೀಶ್ ಶೆಟ್ಟರ್-ರಮೇಶ್ ಜಾರಕಿಹೊಳಿ, ಲಖನ್ ಭೇಟಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 8 ವಿಕೆಟ್ ಗಳ ಜಯವಂದೇ ಮಾತರಂ ಗೀತೆ ಮೊಟಕು ವಿವಾದ: ಸೆ.15ರಿಂದ ಮತ್ತೊಂದು ಪಾದಯಾತ್ರೆ ಘೋಷಿಸಿದ ಬಿಜೆಪಿ ಇ.ಡಿಗೆ ನೇರ ಸವಾಲು ಹಾಕಿದ ಸಚಿವ ಸತೀಶ್ ಜಾರಕಿಹೊಳಿದ. ಅಪ್ರಿಕಾ-ನಮಿಬಿಯಾ 3 ನೇ ಏಕದಿನ ಪಂದ್ಯ ನಾಳೆ ರೈತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಪ್ರಕಾಶ್ ಖಂಡ್ರೆ ಆಗ್ರಹ