LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಬಿಜೆಪಿ ಅಧಿಕಾರಕ್ಕೆ ಬರುವುದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ. ವೈ ವಿಜಯೇಂದ್ರ

Advertisement

ಬೆಂಗಳೂರು: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತದೆ. ಆದರೆ ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯದಲ್ಲಿ ವಿಶ್ವಾಸವಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದ ಜನರಿಗೆ ದೇಶಾಭಿಮಾನದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಕಾಂಗ್ರೆಸ್, ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ಬೆಂಬಲಿಸುತ್ತದೆ.ಆದರೆ ಬಿಜೆಪಿ ದೇಶದ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತಿದೆ ಎಂದು ತಿಳಿಸಿದರು.

ಮೀಸಲಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೆ ಹೇಳಿದ್ದೊಂದು ಆದರೆ ನಡೆದುಕೊಂಡಿದ್ದೇ ಒಂದು. ಒಟ್ಟಾಗಿ, ಒಂದಾಗಿ ದೇಶವನ್ನು ಮುನ್ನಡೆಸಲು ಬಿಜೆಪಿ ಮುಂದಾದರೆ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸಿಕೊಂಡು ಮತ ಪಡೆಯಲು ನೋಡುತ್ತಿದೆ ಎಂದು ದೂರಿದರು.

ಗ್ಯಾರಂಟಿ ಇಲ್ಲದೆ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದು ಮನವರಿಕೆ ಆಗಿರುವ ಕಾಂಗ್ರೆಸ್ ಈಗ ಭಾರತ್ ಜೋಡೊ ಸಂಘಗಳ ಮೂಲಕ ರಾಜ್ಯದ ಜನರಿಗೆ ಕಿವಿ ಹೂ ಮುಡಿಸಿ ಅಧಿಕಾರಕ್ಕೆ ಬರಬಹುದು ಎಂದು ಹೊರಟಿದೆ.

ಆದರೆ ಪ್ರಧಾನಿ ಮೋದಿ ಅವರು 2047 ರ ವೇಳೆಗೆ ವಿಕಸಿತ ಭಾರತ ಆಗಬೇಕು, ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಬೇಕು, ಸಮಾಜದ ಕಟ್ಟಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬ ಇಚ್ಛಾಶಕ್ತಿ ಹೊಂದಿದ್ದಾರೆ. ನಾನು ಪ್ರಧಾನಿ ಅಲ್ಲ ಪ್ರಧಾನ ಸೇವಕ ಎಂಬ ಭಾವವನೆಯಿಂದ ಭಾರತವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.



Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಕ್ಸ್ ಸಹಕಾರದ ಎರಡು ದಶಕಗಳ ನೆನಪಿನ ವಿಶೇಷ ಅಂಚೆ ಚೀಟಿಗಳ ಬಿಡುಗಡೆ ಸಿಎಂ ಖಡಕ್ ಸೂಚನೆ ಬೆನ್ನಲ್ಲೇ ರಾಜ್ಯಾದ್ಯಂತ 800 ಬಾಲ ಕಾರ್ಮಿಕರ ರಕ್ಷಣೆಗ್ರಾಮೀಣ ಭಾಗದಲ್ಲೂ ತಜ್ಞ ವೈದ್ಯರ ಸೇವೆ ಕಲ್ಪಿಸಲು ಮಹತ್ವದ ಕ್ರಮ: ಆಸ್ಪತ್ರೆಗಳ ದತ್ತು ನೀಡಲು ಸರ್ಕಾರ ನಿರ್ಧಾರ ಬಿಜೆಪಿ ಅಧಿಕಾರಕ್ಕೆ ಬರುವುದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ. ವೈ ವಿಜಯೇಂದ್ರಗಮನ ಸೆಳೆದ ಜಗದೀಶ್ ಶೆಟ್ಟರ್-ರಮೇಶ್ ಜಾರಕಿಹೊಳಿ, ಲಖನ್ ಭೇಟಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 8 ವಿಕೆಟ್ ಗಳ ಜಯವಂದೇ ಮಾತರಂ ಗೀತೆ ಮೊಟಕು ವಿವಾದ: ಸೆ.15ರಿಂದ ಮತ್ತೊಂದು ಪಾದಯಾತ್ರೆ ಘೋಷಿಸಿದ ಬಿಜೆಪಿ ಇ.ಡಿಗೆ ನೇರ ಸವಾಲು ಹಾಕಿದ ಸಚಿವ ಸತೀಶ್ ಜಾರಕಿಹೊಳಿದ. ಅಪ್ರಿಕಾ-ನಮಿಬಿಯಾ 3 ನೇ ಏಕದಿನ ಪಂದ್ಯ ನಾಳೆ ರೈತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಪ್ರಕಾಶ್ ಖಂಡ್ರೆ ಆಗ್ರಹ