ಚೆಸ್ಟರ್ ಲೀ ಸ್ಟ್ರೀಟ್ ( ಇಂಗ್ಲೆಂಡ್ ) ಇಲ್ಲಿನ ರೀವರ್ಸ್ ಸೈಡ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಮಹಿಳೆಯರ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ 13 ರನ್ ಗಳಿಂದ ಭಾರತ ತಂಡದ ಮಹಿಳೆಯರು ಜಯಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರು ನಿಗದಿತ 50 ಓವರುಗಳಲ್ಲಿ 5 ವಿಕೆಟ್ ಗೆ 318 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಆಡಿದ ಇಂಗ್ಲೆಂಡ್ ಮಹಿಳೆಯರು 49.5 ಓವರುಗಳಲ್ಲಿ 305 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸಿದರು.
ಭಾರತ ಪರವಾಗಿ ತಂಡದ ನಾಯಕಿ ಹರಮನ್ ಪ್ರೀತ್ ಕೌರ್ 84 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 102 ರನ್ ಗಳ ಶತಕ ಸಿಡಿಸಿದರು. ಇದರೊಂದಿಗೆ ಅವರು ಪಂದ್ಯ ಶ್ರೇಷ್ಠ ಗೌರವಕ್ಕೂ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.