LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರಜ್ವಲ್ ರೇವಣ್ಣನವರ 34 ನೇಯ ವರ್ಷದ ಹುಟ್ಟುಹಬ್ಬ ಆಚರಣೆ

Advertisement
ಅರಸೀಕೆರೆ : ಕ್ಷೇತ್ರದ ಜೆಡಿಎಸ್ ಮುಖಂಡರಾದ ಜ್ಯೋತಿ ಗಂಗಾಧರ್ ರವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ವಿಜ್ಞೇಶ್ವರ ದೇವಸ್ಥಾನದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ರೊಂದಿಗೆ ಪೂಜೆ ಸಲ್ಲಿಸಿದರು ಹಾಗೂ ಮಾಜಿ ಶಾಸಕರಾದ ಪರಮೇಶ್ವರಪ್ಪ ರವರು ನಮ್ಮ ಮಾಧ್ಯಮದ ಜೊತೆ ಮಾತನಾಡಿ ವಿಜ್ಞೇಶ್ವರ ದೇವರು ಮಾಜಿ ಸಂಸದ ಪ್ರಜ್ವಲ್ ರೇವಣ್ಣರವರಿಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಹಾಗೂ ಈಗ ಬಂದ ಸಂಕಷ್ಟ ನಿವಾರಣೆ ಮಾಡಲಿ.

ಮತ್ತು ಮುಂದಿನ ದಿನಗಳಲ್ಲಿ ರಾಜಕೀಯ ಜೀವನದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉಜ್ವಲ ಭವಿಷ್ಯ ನೀಡಲಿ ಎಂದು ವಿಘ್ನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ನಂತರ ಅರಸೀಕೆರೆ ನಗರದ ಸರ್ಕಾರಿ ಜೆ ಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ನಂತರ ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್ ರವರು ಸಭೆ ಉದ್ದೇಶಿಸಿ ಮಾತನಾಡಿ ನಮ್ಮ ಮಾಜಿ ಸಂಸದರು ಪ್ರಜ್ವಲ್ ರೇವಣ್ಣ ರವರಿಗೆ ಈಗಿರುವ ಸಂಕಷ್ಟ ನಿವಾರಣೆ ಆಗಲಿ ಮುಂದಿನ ದಿನಗಳಲ್ಲಿ ರಾಜಕೀಯ ಜೀವನಕ್ಕೆ ಮರಳಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷರು ಶೇಖರ್ ನಾಯಕ್ ಹಾಗೂ ಮಾಜಿ ಉಪಾಧ್ಯಕ್ಷರು ಬಸವಲಿಂಗ, ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷರು ನಿರಂಜನ್ ಮೂರ್ತಿ, ಪ್ರಜ್ವಲ್ ರೇವಣ್ಣ ಅಭಿಮಾನಿಗಳ ಬಳಗದ ಎಸ್ ಎಲ್ ಎನ್ ಯೋಗೇಶ್ ,ಗಂಡಸಿ ಹೋಬಳಿಯ ಜೆಡಿಎಸ್ ಮುಖಂಡರಾದ ಜಕ್ನಳ್ಳಿವಾಸು,ಮಂಜುನಾಥ , ವಿಠಲಾಪುರ ಮಧು, ಪುಟ್ಟ ಬಸಪ್ಪ  ಚಿಕ್ಕೂರು,ಮೇಲನಳ್ಳಿ ಮಲ್ಲಿಕಾರ್ಜುನ್ , ಅಶ್ವಥ್. ಅರಸೀಕೆರೆ ನಗರದ ಜೆಡಿಎಸ್ ಮುಖಂಡರುಗಳಾದ
ರವಿ .ಗಣೇಶ್. ನವಾಜ್, ಮನು ,ಭರತ್ ,ವಿಶ್ವನಾಥ ಜೆಡಿಎಸ್ ಕಾರ್ಯಕರ್ತ ಬಂಧುಗಳು , ರೈತ ಬಾಂಧವರು, ಸಾರ್ವಜನಿಕ ಬಂಧುಗಳು ಇನ್ನಿತರರು ಉಪಸ್ಥಿತರಿದ್ದರು.

ವರದಿ : ರಾಜು ಅರಸಿಕೆರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ