LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಲೋಕಾರ್ಪಣೆ

Advertisement
ಬಾಗಲಕೋಟೆ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬಾಗಲಕೋಟೆ, ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆಯ ಸಹಯೋಗದೊಂದಿಗೆ ಆಯೋಜಿಸಲಾದ ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಮತ್ತು ಸಂಘಟಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಇಂದು ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ನೆರವೇರಿತು.



ಈ ಕಾರ್ಯಕ್ರಮವನ್ನು ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್. ಬಿ. ತಿಮ್ಮಾಪೂರ ಅವರು ಉದ್ಘಾಟಿಸಿ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಿಸಿದರು ಮತ್ತು ಹೊಸ ಕೃತಿಗಳ ಲೋಕಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಮತ್ತು ಸಂಘಟನೆಯ ಕ್ಷೇತ್ರದಲ್ಲಿ ತೊಡಗಿರುವವರ ಮಕ್ಕಳ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.



 

ಮಾತನಾಡಿದ ಸಚಿವ ಆರ್. ಬಿ. ತಿಮ್ಮಾಪೂರ ಅವರು, "ಕನ್ನಡ ಸಾಹಿತ್ಯ, ಜಾನಪದ, ಮತ್ತು ಪತ್ರಿಕೋದ್ಯಮ ಕ್ಷೇತ್ರಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಈ ಕ್ಷೇತ್ರಗಳಲ್ಲಿ ತೊಡಗಿರುವವರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ," ಎಂದು ಹೇಳಿದರು. ಕೃತಿ ಲೋಕಾರ್ಪಣೆಯ ಮಹತ್ವವನ್ನು ಒತ್ತಿ ಹೇಳಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ : ಪ್ರಿಯಾಂಕ್ ಖರ್ಗೆಗೆ ಬಿ. ಎಲ್ ಸಂತೋಷ್ ತಿರುಗೇಟು ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ವಾಪಸ್ ಪಡೆಯುವುದಿಲ್ಲ : ಯು.ಟಿ. ಖಾದರ್ ಸ್ಪಷ್ಟನೆಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್ ಬೂಮ್ರಾ- ಸಾಯಿ ಸುದರ್ಶನ ಸಂಪರ್ಕದಲ್ಲಿದ್ದೇವೆ: ಶುಭಮಾನ್ ಗಿಲ್ಯುವ ಸಮುದಾಯದ ದಾರಿ ತಪ್ಪಿಸಲು ನನ್ನ ಪದ ದುರ್ಬಳಕೆ : ಸಿಜೆಐ ಸೂರ್ಯಕಾಂತ್‌ ಕಳವಳ ಸಾರ್ವಜನಿಕ ಸ್ಥಳಗಳ ಬಳಕೆ ನಿಯಮ RSS ವಿರುದ್ಧವಲ್ಲ : ಪ್ರಿಯಾಂಕ್ ಖರ್ಗೆ ತಿರುಗೇಟು ನಿನ್ನ ಏಳ್ಗೆಗೆ ನೀನೆ ಶಿಲ್ಪಿ : ಜಗನ್ನಾಥನೇತಾಜಿ ಶಿಕ್ಷಣ ಸಂಸ್ಥೆಯಿಂದ 80 ಮೀ.ಉದ್ದದ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆರಾಜ್ಯದಲ್ಲಿ ಪಡಿತರ ಚೀಟಿ ಪರಿಷ್ಕರಣೆ ತಾತ್ಕಾಲಿಕ ಸ್ಥಗಿತ : ಸಚಿವ ರಿಜ್ವಾನ್ ಅರ್ಷದ್ಇಡಿ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ : ಶಿವಾನಂದ ನೀಲಣ್ಣವರ ಅರೆಸ್ಟ್