LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕದ 17 ಪೊಲೀಸ್ ಅಧಿಕಾರಿಗಳಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ

Advertisement

ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ(Independence Day) ಶುಭ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ 'ರಾಷ್ಟ್ರಪತಿ ಪದಕ'ಗಳನ್ನು ಘೋಷಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ಪಡೆಗೆ ಒಟ್ಟು 17 ಪದಕಗಳು ಲಭಿಸಿದ್ದು, ಅದರಲ್ಲಿ ಒಬ್ಬರಿಗೆ 'ವಿಶಿಷ್ಟ ಸೇವಾ ಪದಕ' ಹಾಗೂ 16 ಮಂದಿಗೆ 'ಶ್ಲಾಘನೀಯ ಸೇವಾ ಪದಕ' ಸಂದಿದೆ.

ಎಸಿಪಿ ಹೆಚ್.ಎನ್. ಧರ್ಮೇಂದ್ರ ಅವರಿಗೆ 'ವಿಶಿಷ್ಟ ಸೇವಾ ಪದಕ'

ಸಿಸಿಬಿಯ (CCB) ಸಹಾಯಕ ಪೊಲೀಸ್ ಕಮಿಷನರ್ (ACP) ಹೆಚ್.ಎನ್. ಧರ್ಮೇಂದ್ರ ಅವರಿಗೆ ಅವರು ಸಲ್ಲಿಸಿದ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ 'ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ' ಪ್ರಕಟಿಸಲಾಗಿದೆ.

16 ಅಧಿಕಾರಿಗಳು ಮತ್ತು ಸಿಬ್ಬಂದಿಗೆ 'ಶ್ಲಾಘನೀಯ ಸೇವಾ ಪದಕ

ರಾಜ್ಯದ ವಿವಿಧ ವಿಭಾಗಗಳು, ಕಮಿಷನರೇಟ್‌ಗಳು ಹಾಗೂ ಜಿಲ್ಲೆಗಳಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ 16 ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಪದಕ ಪುರಸ್ಕೃತರ ಪಟ್ಟಿ ಇಲ್ಲಿದೆ:

ಸಾರಾ ಫಾತಿಮಾ - ಎಸ್‌ಪಿ (SP), ರೈಲ್ವೇಸ್, ಬೆಂಗಳೂರು

ಥಾಮಸ್ ಮ್ಯಾಥ್ಯೂ - ಕಮಾಂಡೆಂಟ್, ಕೆ.ಎಸ್.ಆರ್.ಪಿ (KSRP)

ಮಹಾದೇವ್ - ಎಸಿಪಿ (ACP), ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು

ಪರಮಾನಂದ್ - ಡಿವೈಎಸ್‌ಪಿ (DySP), ಡಿ.ಎ.ಆರ್ (DAR), ರಾಯಚೂರು

ಷಣ್ಮುಗವರ್ಮಾ - ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು

ಭಾವುದ್ದೀನ್ ರುಕ್ಮುದ್ದೀನ್ - ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ

ಗುರುಪ್ರಸಾದ್ ಗೋಪಾಲ್ ನಾಯಕ್ - ಇನ್ಸ್‌ಪೆಕ್ಟರ್, ಸಿಐಡಿ (CID)

ನಯೀಂ - ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ (RPI), ರಾಜಭವನ

ಶ್ರೀನಿವಾಸ - ಪಿ.ಎಸ್.ಐ (PSI), ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು

ಜ್ಞಾನದೇವ್ ನವಲ ತರಾಸೆ - ಎ.ಆರ್.ಎಸ್.ಐ (ARSI), ಕೆ.ಎಸ್.ಆರ್.ಪಿ

ಮಹದೇವಸ್ವಾಮಿ - ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತೆ

ಮಾರಿಯಾ ಜೋಸೆಫ್ ದಿನೇಶ್ ಕುಮಾರ್ - ಹೆಡ್ ಕಾನ್ಸ್‌ಟೇಬಲ್, ಡಿ.ಸಿ.ಆರ್.ಇ (DCRE), ಕೆಜಿಎಫ್

ಚಂದ್ರಶೇಖರ ಚಿಕ್ಕಣ್ಣನವರ್ - ಹೆಡ್ ಕಾನ್ಸ್‌ಟೇಬಲ್, ಕೆ.ಎಸ್.ಆರ್.ಪಿ

ಅಬ್ದುಲ್ ಕಮಾಲ್ - ಹೆಡ್ ಕಾನ್ಸ್‌ಟೇಬಲ್, ತರೀಕೆರೆ ಠಾಣೆ

ನಾಗೇಶ್ ಮಚ್ಚಯ್ಯ - ಹೆಡ್ ಕಾನ್ಸ್‌ಟೇಬಲ್, ಸಿಐಡಿ (CID)

ಮನೋಹರ್ - ಪೊಲೀಸ್ ಕಾನ್ಸ್‌ಟೇಬಲ್, ಹುಣಸೂರು ಠಾಣೆ

ರಾಷ್ಟ್ರಪತಿ ಪದಕ ಗೌರವಕ್ಕೆ ಪಾತ್ರರಾದ ರಾಜ್ಯದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಹಾಗೂ ಅಭಿನಂದನೆಗಳು ವ್ಯಕ್ತವಾಗಿವೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST