ಬೆಲ್‌ಪಾಸ್ಟ್(ಐರ್ಯಲೆAಡ್): ಪ್ರವಾಸಿ ಅಪಘಾನಿಸ್ತಾನ್ ಹಾಗೂ ಐರ್ಯಲೆಂಡ್ ಕ್ರಿಕೆಟ್ ತಂಡಗಳ ನಡುವಿನ ೫ ನೇ ಕಡೆಯ ಏಕದಿನ ಪಂದ್ಯ ನಾಳೆ ಇಲ್ಲಿ ಆರಂಭವಾಗಲಿದೆ.
ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೩:೧೫ ಕ್ಕೆ ಆರಂಭವಾಗುವುದು. ಮೊದಲ ೪ ಪಂದ್ಯಗಳ ಪೈಕಿ ೩ ಪಂದ್ಯಗಳಲ್ಲಿ ಗೆದ್ದಿರುವ ಪ್ರವಾಸಿ ಅಪಘಾನಿಸ್ತಾನ್ ತಂಡವು ಈಗಾಗಲೇ ಸರಣಿ ಗೆದ್ದಿದೆ.


