LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಚಿವರ ಮೇಲೆ 'ಖಾಸಗಿ ಸ್ಟಿಂಗ್ ಆಪರೇಷನ್' ಬಲೆ: ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎಚ್ಚರಿಕೆ

Advertisement

ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಂದು ಸ್ಫೋಟಕ ವಿದ್ಯಮಾನ ಹೊರಬಿದ್ದಿದ್ದು, ಆಡಳಿತಾರೂಢ ಸರ್ಕಾರದ ಪ್ರಮುಖ ಸಚಿವರನ್ನು ಗುರಿಯಾಗಿಸಿಕೊಂಡು ವಿಪಕ್ಷಗಳು ಖಾಸಗಿ ಏಜೆನ್ಸಿಗಳ ಮೂಲಕ 'ಸ್ಟಿಂಗ್ ಆಪರೇಷನ್' ನಡೆಸುತ್ತಿವೆ ಎಂಬ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿಗಳೇ ಈ ಕುರಿತು ಸಚಿವರಿಗೆ ಗಂಭೀರ ಎಚ್ಚರಿಕೆ ನೀಡಿದ್ದು, ಹಲವು ಮಂತ್ರಿಗಳಲ್ಲಿ ಆತಂಕ ಮೂಡಿಸಿದೆ.

ಸುಮಾರು 50ಕ್ಕೂ ಹೆಚ್ಚು ಅಜೆಂಡಾಗಳನ್ನು ಇಟ್ಟುಕೊಂಡು ನಡೆದಿದ್ದ ಕ್ಯಾಬಿನೆಟ್ ಸಭೆಯ ಕೊನೆಯಲ್ಲಿ ಗುಪ್ತಚರ ಇಲಾಖೆಯ ಮಾಹಿತಿಯನ್ನು ಉಲ್ಲೇಖಿಸಿ ಈ ವಿಚಾರವನ್ನು ಸಿಎಂ ಪ್ರಸ್ತಾಪಿಸಿದ್ದಾರೆ.

ಪ್ರಸ್ತುತ 4 ರಿಂದ 5 ಸಚಿವರ ಮೇಲೆ ಈಗಾಗಲೇ ಸ್ಟಿಂಗ್ ಕಾರ್ಯಾಚರಣೆಯ ನಿಗಾ ಇಡಲಾಗಿದ್ದು, ಸರ್ಕಾರಕ್ಕೆ ಮುಜುಗರ ತರುವಂತಹ ದಾಖಲೆ ಅಥವಾ ವಿಡಿಯೋಗಳನ್ನು ಸಂಗ್ರಹಿಸಲು ಖಾಸಗಿ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಲನವಲನ ಹಾಗೂ ಮಾತುಕತೆಗಳ ಮೇಲೆ ನಿಗಾ:

ಸಚಿವರು ಯಾರನ್ನು ಭೇಟಿಯಾಗುತ್ತಾರೆ, ಎಲ್ಲೆಲ್ಲಿ ಓಡಾಡುತ್ತಾರೆ ಮತ್ತು ದೂರವಾಣಿ/ಖಾಸಗಿ ಮಾತುಕತೆಗಳಲ್ಲಿ ಆಡುವ ಪ್ರತಿಯೊಂದು ಮಾತೂ ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆಯಿಂದಿರಬೇಕು.

ಆಸೆ-ಆಮಿಷಗಳಿಗೆ ಬಲಿಯಾಗದಿರಿ:

ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಚರ್ಚೆ ವೇಳೆ ಮತ್ತು ಯಾವುದೇ ಆಸೆ-ಆಮಿಷಗಳು ಬಂದಾಗ ಸಚಿವರು ಎಚ್ಚರ ವಹಿಸಬೇಕು. ಇಲಾಖೆಯ ಗೌಪ್ಯತೆಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು.

ಶಂಕಿತ ಸಚಿವರ ಪಟ್ಟಿ ಬಹಿರಂಗ:

ಈಗಾಗಲೇ ಯಾರ್ಯಾರ ಮೇಲೆ ಸ್ಟಿಂಗ್ ಕಣ್ಣಿಡಲಾಗಿದೆ ಎಂಬ ಅನುಮಾನಾಸ್ಪದ ಲಿಸ್ಟ್‌ ಅನ್ನು ಸಿಎಂ ಸಭೆಯಲ್ಲಿ ಉಲ್ಲೇಖಿಸಿದ್ದು, ಸಂಪುಟದ ಹಲವು ಸದಸ್ಯರನ್ನು ಥಂಡಾ ಹೊಡೆಯುವಂತೆ ಮಾಡಿದೆ.

4-5 ಸಚಿವರನ್ನು ಬಲೆಗೆ ಬೀಳಿಸುವ ಪ್ರಯತ್ನ?

ಸಂಪುಟ ಸಭೆಯಲ್ಲಿ, ಪ್ರಸ್ತುತ 4-5 ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

ಸಚಿವರ ಮಾತುಕತೆ, ಸಾರ್ವಜನಿಕ ಹೇಳಿಕೆಗಳು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳೊಂದಿಗಿನ ಸಂಪರ್ಕ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ದಾಖಲಿಸಿ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಿಎಂ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಸಚಿವರು ಆಸೆ, ಆಮಿಷ ಅಥವಾ ಪ್ರಚೋದನೆಗೆ ಒಳಗಾಗಿ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದೆ.

ಯಾರನ್ನು ಭೇಟಿಯಾಗುತ್ತಾರೆ, ಯಾವ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಎಂಬುದರಲ್ಲೂ ಎಚ್ಚರಿಕೆ ವಹಿಸುವಂತೆ ಸಚಿವರಿಗೆ ಸಲಹೆ ನೀಡಲಾಗಿದೆ ಎಂದು ವರದಿಯಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್ ನಾಳೆ ಜಿಪಂ-ತಾಪಂ ಚುನಾವಣೆ ಮೀಸಲಾತಿಯ ಪ್ರಾಥಮಿಕ ಅಧಿಸೂಚನೆ ಬಿಡುಗಡೆ : ಈಶ್ವರ್‌ ಖಂಡ್ರೆ ಸ್ಟಿಂಗ್ ಏಜೆನ್ಸಿಗಳ ಬಗ್ಗೆ ಸಿಎಂ ಸ್ಪಷ್ಟನೆ ನೀಡಲಿ: ಬಿ.ವೈ ವಿಜಯೇಂದ್ರ ಸಚಿವರ ಮೇಲೆ 'ಖಾಸಗಿ ಸ್ಟಿಂಗ್ ಆಪರೇಷನ್' ಬಲೆ: ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎಚ್ಚರಿಕೆದಸರಾ ಹಬ್ಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಆತ್ಮೀಯವಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆಮಂತ್ರಿಸಿದೆವಿದ್ಯಾರ್ಥಿಗಳು ಓದುವ ಮೂಲಕ ತಮ್ಮ ವ್ಯಕ್ತಿತ್ವವನ್ನು  ಬೆಳೆಸಿಕೊಳ್ಳಬೇಕು : ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ