LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಜಕೀಯ ರಹಿತ ಆಡಳಿತದಿಂದ ಸಹಕಾರಿ ಸಂಸ್ಥೆಗಳ ಪ್ರಗತಿ

Advertisement
---------------ಖಡಕಲಾಟದಲ್ಲಿ ನವಗ್ರಹ ಸೋಸಾಯಿಟಿ ಪ್ರಥಮ ಶಾಖಾರಂಭ ವೇಳೆ ಉತ್ತಮ ಪಾಟೀಲ ಅಭಿಮತ

ನಿಪ್ಪಾಣಿ:  ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದರೆ ಮಿತ ಖರ್ಚು, ಪಾರದರ್ಶಕ, ರಾಜಕೀಯ ರಹಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಸಾಧ್ಯವೆಂದು ನಿಪ್ಪಾಣಿ ಮತಕ್ಷೇತ್ರದ ಯುವ ನಾಯಕ ಸಹಕಾರರತ್ನ ಉತ್ತಮ ಪಾಟೀಲ ಅವರು ನಿಪ್ಪಾಣಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಶಮನೇ ವಾಡಿಯ ನವಗ್ರಹ ಮೈನಾರಿಟಿ ಕೋ ಆಪ ಸೊಸೈಟಿಯ ಪ್ರಥಮ ಶಾಖಾರಂಭ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಬೆಳಿಗ್ಗೆ ಓಂಕಾರ್ ಉಪಾಧ್ಯೇ ಅವರಿಂದ ಲಕ್ಷ್ಮಿ ಸರಸ್ವತಿ ಪೂಜೆ ನಡೆಯಿತು. ತದನಂತರ ಸ್ವಸ್ತಿ ಶ್ರೀ ಜನಿಸೇನ ಭಟ್ಟಾರಕ, ಧರ್ಮಸೇನ ಭಟ್ಟಾರಕ ಹಾಗೂ ಶಿವಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಿಬ್ಬನ್ ಬಿಚ್ಚುವ ಮೂಲಕ ಶಾಖೆ ಉದ್ಘಾಟನೆ ಮಾಡಲಾಯಿತು. ಸತೀಶ್ ಪಾಟೀಲ್, ರಾಕೇಶ್ ಚಿಂಚನೇ, ಆರ್ ಬಿ ಖೋತ,ಸಂಜಯ ಚೌಗಲೇ, ಸಂಸ್ಥೆಯ ಅಧ್ಯಕ್ಷ ಭರತಕುಮಾರ ಖೋತ ಮಾತನಾಡಿ ಸಂಸ್ಥೆಯ ಸಾಂಪತ್ತಿಕ ಸ್ಥಿತಿ ವಿವರಿಸಿ, ಸಂಸ್ಥೆಯ ಮೊದಲ ಶಾಖೆ ಖಡಕಲಾಟದಲ್ಲಿ ಮೊದಲ ದಿನವೇ ದಾಖಲೆ 1ಕೋಟಿ 45ಲಕ್ಷ ರೂಪಾಯಿ ಠೇವು ಸಂಗ್ರಹಣೆಯಾಗಿರುದಾಗಿ ತಿಳಿಸಿದರು.

ವೇದಿಕೆಯಲ್ಲಿಯ ಗಣ್ಯರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ಸಮಾರಂಭ ದಲ್ಲಿ ನರಸಗೊಂಡ ಪಾಟೀಲ, ರಮೇಶ ವನಕುದ್ರೆ, ನಾಸಿರ್ ತಹಸೀಲ್ದಾರ್ ಸೇರಿದಂತೆ ಕಡಕ ಲಾಟ ಶಮನೇವಾಡಿ ಶಾಖೆಯ ಎಲ್ಲ ಸಂಚಾಲಕರು, ಸದಸ್ಯರು, ಬಾಹುಬಲಿ ಲಕ್ಕನ್ನವರ, ಸ್ವಾಗತಿಸಿ ದರು. ಪುಷ್ಪದಂತ ಜನಾಜ ವಂದಿಸಿದರು.

ವರದಿ: ಮಹಾವೀರ ಚಿಂಚಣೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ