LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭೂಮಿ- ವಸತಿ ಹಕ್ಕಿಗಾಗಿ ಪ್ರತಿಭಟನೆ!

Advertisement
ಸಿಂಧನೂರು : ಜುಲೈ 18 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕ ಸಮಿತಿ ಸಿಂಧನೂರು ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಭೂಮಿ ಒಂದು ಉತ್ಪಾದನಾ ಸಾಧನವಾಗಿದೆ ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ.

ವೈದಿಕ ಧರ್ಮ ಅರ್ಥಾತ್ ಬ್ರಹ್ಮಣ ಧರ್ಮ ತಲತಲಾಂತರ ಗಳಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ ಸ್ವಾತಂತ್ರ್ಯ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಂದೋಲನದಿಂದಾಗಿ ದಲಿತ- ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಹ್ಮಣಶಾಹಿ/ ಬಂಡವಾಳಶಾಹಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ ವಸತಿ ಹಕ್ಕು ಮತ್ತು ಇತರೆ ಹಕ್ಕೂತ್ತಾಯಗಳಿಗೆ ಆಗ್ರಹಿಸಿ 18 ಜೂಲೈ 2025 ರಂದು ಪ್ರಥಮ ಅಂತವಾಗಿ ತಾಲೂಕ ಕಛೇರಿ ಮುಂದೆ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಪ್ರತಿಭಟನ ಧರಣಿ ಹಮ್ಮಿಕೊಳ್ಳಲಾಗಿದೆ ಸರ್ಕಾರದ ಮುಂದಿನ ನಡೆ ಗಮನಿಸಿ ಮುಂದಿನ ಹೋರಾಟವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮನವಿ ಪತ್ರ ಸಲ್ಲಿಸಲಾಯಿತು.

ಸಂದರ್ಭದಲ್ಲಿ - ವಿಭಾಗೀಯ ಸಂಚಾಲಕ ಚಿನ್ನಪ್ಪ ಹೆಡಗಿಬಾಳ ಕ್ಯಾಂಪ್, ಜಿಲ್ಲಾ ಸಂಚಾಲಕ ಆರ್. ಅಂಬ್ರುಸ್ ಕೊಡ್ಲಿ, ಜಿಲ್ಲಾ ಸಂಘಟನಾ ಸಂಚಾಲಕ ಶಿವರಾಜ ಬಾಗಲವಾಡ, ದಲಿತ ಹಿರಿಯ ಮುಖಂಡ ಅಲ್ಲಮಪ್ರಭು ಪೂಜಾರಿ, ನಗರ ಘಟಕ ಅಧ್ಯಕ್ಷ ಉಮೇಶ್ ಸುಕಲ್ಪೇಟೆ, ಮಂಜು, ಹುಚ್ಚಪ್ಪ ಕವಿತಾಳ, ಶಿವಣ್ಣ ಪರಂಗಿ, ಮರಿಯಪ್ಪ ಜಾಲಿಹಾಳ್, ಇನ್ನು ಮುಂತಾದವರಿದ್ದರು

ವರದಿ  : ಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ